ಕುಂದಾಪುರ: 163 ಬಾರಿ ಹೋಮ್ ಕ್ವಾರಂಟೇನ್ ‌ನಿಯಮ ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

Update: 2020-07-13 12:16 GMT

ಕುಂದಾಪುರ, ಜು.13: ಮುಂಬೈಯಿಂದ ಬಂದು 14 ದಿನಗಳ ಕಾಲ ಹೋಮ್ ಕ್ವಾರಂಟೇನ್‌ನಲ್ಲಿದ್ದ ವ್ಯಕ್ತಿಯೊಬ್ಬರು ಬರೋಬರಿ 163 ಬಾರಿ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡಿದ್ದು, ಇವರ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಜು.12ರಂದು ಪ್ರಕರಣ ದಾಖಲಾಗಿದೆ.

ಮುಂಬೈನಿಂದ ಜೂ.29ರಂದು ಕುಂದಾಪುರಕ್ಕೆ ಆಗಮಿಸಿರುವ ಸಹಬ್ ಸಿಂಗ್, ಕೋಟೇಶ್ವರದ ಬೈಪಾಸ್ ಸಮೀಪದ ಬಾಡಿಗೆ ಮನೆಯೊಂದರಲ್ಲಿ ಹೋಮ್ ಕ್ವಾರಂಟೇನ್‌ನಲ್ಲಿದ್ದರು. ಜು.13ಕ್ಕೆ ಅವರ ಹೋಂ ಕ್ವಾರಂಟೈನ್ ಅವಧಿ ಮುಗಿಯುತ್ತಿತ್ತು.ಆದರೆ ಇವರು ಅವಧಿ ಮುಗಿಯುವ ಮೊದಲೇ ಒಟ್ಟು 163 ಬಾರಿ ಹೋಮ್ ಕ್ವಾರಂಟೇನ್ ನಿಯಮ ಉಲ್ಲಂಘಿಸಿ, ಕುಂದಾಪುರ, ಉಡುಪಿಯಲ್ಲಿ ತಿರುಗಾಡಿರುವುದು ಜಿಪಿಎಸ್ ಪರಿಶೀಲನೆ ಮೂಲಕ ತಿಳಿದುಬಂದಿದೆ. ಈ ಬಗ್ಗೆ ಫ್ಲೈಯಿಂಗ್ ಸ್ವ್ಕಾಡ್ ಅಧಿಕಾರಿ ಎನ್.ಜಿ.ಭಟ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿರುವ ಕುಂದಾಪುರ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News