ಉಡುಪಿಯಲ್ಲಿ ಶ್ರೀಕನಕ ಶಾಖಾಮಠ ಸ್ಥಾಪನೆಗೆ ನಿವೇಶನ ನೀಡಲು ಆಗ್ರಹಿಸಿ ಮನವಿ

Update: 2020-07-13 12:20 GMT

ಉಡುಪಿ, ಜು.13: ಉಡುಪಿ ನಗರದಲ್ಲಿ ಶ್ರೀಕನಕ ಗುರುಪೀಠದ ಶಾಖಾ ಮಠವನ್ನು ಸ್ಥಾಪಿಸಲು ಶ್ರೀಕಾಗಿನೆಲೆ ಮಹಾಸಂಸ್ಥಾನಕ್ಕೆ ನಿವೇಶನ ಮಂಜೂರು ಮಾಡುವಂತೆ ಆಗ್ರಹಿಸಿ ಹಾಲುಮತ ಮಹಾಸಭಾ ಸೋಮವಾರ ರಾಜ್ಯ ನಗರಾಭಿವೃದ್ಧಿ ಸಚಿವ ಬಸವರಾಜು ಅವರಿಗೆ ಮನವಿ ಸಲ್ಲಿಸಿದೆ.

2017ರಲ್ಲಿ ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಶ್ರೀಕನಕ ಜಯಂತೋತ್ಸವ ದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಯಲ್ಲಿ ಶಾಖಾ ಮಠಕ್ಕೆ ಸರಕಾರ ನಿವೇಶನ ನೀಡುವ ಭರವಸೆ ನೀಡಿದ್ದರು ಎಂದು ಮಹಾಸಭಾ ಮನವಿಯಲ್ಲಿ ತಿಳಿಸಿದೆ.

 ಈ ಸಂದರ್ಭದಲ್ಲಿ ಮಹಸಭಾದ ರಾಜ್ಯ ಸಂಚಾಲಕ ಹನುಮಂತ ಜಿ. ಗೋಡಿ, ಜಿಲ್ಲಾಧ್ಯಕ್ಷ ಸಿದ್ದಪ್ಪಎಚ್.ಐಹೊಳೆ, ಪ್ರಮುಖರಾದ ಈರಪ್ಪ ಎಲ್. ಉಗಲವಾಟ, ಶಿವನಗೌಡ ಎಂ.ಪಾಟೀಲ್, ಕುಮಾರ ಟಿ.ಚಿಮ್ಮನಕಟ್ಟಿ, ವಿಠ್ಠಲ್ ವೈ.ಗೌಡರ್, ಗೋವಿಂದಪ್ಪ ವೈ.ಊತ್ತೂರು, ಹನುಮಂತ ಎಂ.ಮಲ್ಲಣ್ಣವರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News