ಪುತ್ತೂರು: ಎಸೆಸೆಲ್ಸಿ ಮೌಲ್ಯಮಾಪನಕ್ಕೆ ತೆರಳುವ ಶಿಕ್ಷಕರಿಗೆ ಬೀಳ್ಕೊಡುಗೆ

Update: 2020-07-13 13:24 GMT

ಪುತ್ತೂರು: ಈ ಬಾರಿಯ ಶೈಕ್ಷಣಿಕ ವರ್ಷದ ಎಸೆಸೆಲ್ಸಿ ಪರೀಕ್ಷಾ ಮೌಲ್ಯಮಾಪನಕ್ಕೆ ಪುತ್ತೂರು ತಾಲೂಕಿನಿಂದ ಮಂಗಳೂರಿನ 6 ಕೇಂದ್ರಗಳಿಗೆ ಹೊರಟ 300 ಮಂದಿ ಶಿಕ್ಷಕರನ್ನು ಶಾಸಕ ಸಂಜೀವ ಮಠಂದೂರು ಅವರು ಸೋಮವಾರ ಪುತ್ತೂರು ಸಂತ ವಿಕ್ಟರ್ ಬಾಲಿಕ ಪ್ರೌಢಶಾಲೆಯ ವಠಾರದಲ್ಲಿ ಬೀಳ್ಕೊಟ್ಟರು. ಹಸಿರು ಧ್ವಜ ತೋರಿಸುವ ಮೂಲಕ ಶಿಕ್ಷಕರು ತೆರಳುವ ಬಸ್‍ಗಳಿಗೆ ಶಾಸಕರು ಚಾಲನೆ ನೀಡಿದರು. 

ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಯಿದೆ ದೇವುಸ್ ಚರ್ಚ್‍ನ ಧರ್ಮಗುರು ವಂ ಆಲ್ಪ್ರೇಟ್ ಜೆ ಪಿಂಟೋ, ಸಹಾಯಕ ಧರ್ಮಗುರು ವಂ ಲ್ವಾರೀ ಪಿಂಟೋ, ಪ್ರೌಢ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ, ಪರೀಕ್ಷಾ ನೋಡೆಲ್ ಅಧಿಕಾರಿ ಜಯರಾಮ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಪ್ರೋ ಜೇವಿಯರ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News