ಕಾಪು ತಾಲೂಕಿನಲ್ಲಿ 5 ಮಂದಿಗೆ ಕೊರೋನ ಸೋಂಕು ದೃಢ

Update: 2020-07-13 15:36 GMT

ಪಡುಬಿದ್ರಿ, ಜು.13: ಕಾಪು ತಾಲೂಕಿನಲ್ಲಿ ಇಂದು ಆರೋಗ್ಯ ಕಾರ್ಯಕರ್ತೆಯೊಬ್ಬರು ಸೇರಿದಂತೆ ಒಟ್ಟು ಐದು ಮಂದಿಗೆ ಕೋವಿಡ್-19 ಸೋಂಕು ದೃಢ ಪಟ್ಟಿದೆ.

ಪಡುಬಿದ್ರಿಯ ಆರೋಗ್ಯ ಕಾರ್ಯಕರ್ತೆ, ಹೆಜಮಾಡಿಯ ಯುವಕ, ಎರ್ಮಾಳು ಬಡಾದ ಪುರುಷರ ಪ್ರಾಥಮಿಕ ಸಂಪರ್ಕದಿಂದ ಸೋಂಕಿಗೊಳಗಾಗಿದ್ದಾರೆ. ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದ ಕಾಪು ಪೊಲಿಪುವಿನ ಮಹಿಳೆ ಹಾಗೂ ಕಾಪು ಪೇಟೆಯ ಸೆಲೂನ್ ಅಂಗಡಿಯ ಆಂಧ್ರ ಮೂಲದ ಕಾರ್ಮಿಕನಿಗೂ ಸೋಂಕು ದೃಢವಾಗಿದೆ. ಇವರ ಪ್ರಾಥಮಿಕ ಸಂಪರ್ಕದ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಸ್ವಯಂ ಪ್ರೇರಿತ ಬಂದ್: ಕೋವಿಡ್-19 ಸೋಂಕು ವ್ಯಾಪಕವಾಗಿ ಎಲ್ಲೆಡೆ ಹರಡುತ್ತಿರುವ ಹಿನ್ನಲೆಯಲ್ಲಿ ಫಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಯಂಪ್ರೇರಿತ ಬಂದ್‌ಗೆ ನಿರ್ಧರಿಸಲಾಗಿದೆ.

ಫಲಿಮಾರು ಗ್ರಾಮದಲ್ಲಿ ಎಲ್ಲಾ ಸಂಘಟನೆಯ ಮುಖಂಡರು, ವ್ಯಾಪಾರಸ್ಥರು, ಪಂಚಾಯತ್ ಸದಸ್ಯರು, ಅಧಿಕಾರಿಗಳ ಸಮಕ್ಷುದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬುಧವಾರದಿಂದ ಸೋಮವಾರದವರೆಗೂ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆವ್ಯಾಪಾರ ವಹಿವಾಟು ನಡೆಸಲಾಗುವುದು. ಪಲಿಮಾರು ಗ್ರಾಪಂ ವ್ಯಾಪ್ತಿಯ ಎಲ್ಲಾ ವ್ಯಾಪಾರಿಗಳು ಹಾಗೂ ಪಲಿಮಾರು, ಅಡ್ವೆ, ನಂದಿಕೂರು, ಅವರಾಲು ಸ್ವಯಂ ಪ್ರೇರಿತ ಬಂದ್‌ನಲ್ಲಿ ಪಾ್ಗೊಳ್ಳಲಿವೆ ಎಂದು ಪ್ರಕಟನೆ ತಿಳಿಸಿದೆ.

ಮಾಸ್ಕ್ ಬಳಕೆ ಕಡ್ಡಾಯ: ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಮಾಸ್ಕ್ ಬಳಕೆ ಕಡ್ಡಾಯವಾಗಿದ್ದು, ಮಾಸ್ಕ್ ಬಳಸದಿದ್ದಲ್ಲಿ ಸ್ಥಳದಲ್ಲೇ ದಂಡ ವಿಧಿಸಲಾಗುವುದು ಎಂದು ಪಡುಬಿದ್ರಿ ಎಸ್‌ಐ ದಿಲೀಪ್ ಎಚ್ಚರಿಸಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಭಾಗದ ಮುಖಂಡರಾದ ನವೀನ್ ಚಂದ್ರ ಜೆ. ಶೆಟ್ಟಿ, ಸಂತೋಷ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ಶರತ್ ಶೆಟ್ಟಿ, ಶಶಿಕಾಂತ್ ಪಡುಬಿದ್ರಿ ನೇತೃತ್ವದ ನಿಯೋಗವೊಂದು ಎಸ್‌ಐ ಅವರನ್ನು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ಪಡುಬಿದ್ರಿ ಠಾಣಾಧಿಕಾರಿಯವರು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಸಾರ್ವಜನಿಕರು ಮಾತ್ರವಲ್ಲದೆ ವ್ಯಾಪಾರಿಗಳು ಕೂಡಾ ವ್ಯಾಪಾರ ನಡೆಸು ವಾಗ ಮಾಸ್ಕ್ ಧರಿಸಬೇಕು. ಮಾಸ್ಕ್ ಬಾಯಿ ಸಹಿತ ಮೂಗನ್ನು ಮುಚ್ಚುವಂತಿರ ಬೇಕು ಇಲ್ಲವಾದರೂ ದಂಡ ತಪ್ಪಿದ್ದಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News