×
Ad

ಕೆಎಂಸಿ ಮಣಿಪಾಲದಲ್ಲಿ ನಾಳೆಯಿಂದ ಹೊರರೋಗಿ ವಿಭಾಗ ಅಪರಾಹ್ನ 1ರವರೆಗೆ

Update: 2020-07-13 21:13 IST

ಉಡುಪಿ, ಜು.13: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಾಳೆಯಿಂದ ಎಲ್ಲಾ ಹೊರರೋಗಿ ವಿಭಾಗ ಸೇವೆಯು ವಾರದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಐದು ದಿನ ಮಾತ್ರ ಅಪರಾಹ್ನ 1:00 ಗಂಟೆಯವರೆಗೆ ಲಭ್ಯ ವಿರುತ್ತದೆ ಎಂದು ಕೆಎಂಸಿ ಮಣಿಪಾಲದ ಪ್ರಕಟಣೆ ತಿಳಿಸಿದೆ.

ಜು.14ರಿಂದ ಜಾರಿಗೆ ಬರುವಂತೆ ಹೊರರೋಗಿ ವಿಭಾಗ ಸೇವೆಯು ಬೆಳಗ್ಗೆ 8:00ರಿಂದ ಅಪರಾಹ್ನ 1:00ರವರೆಗೆ ಲಭ್ಯವಾಗಲಿದೆ. ಎಲ್ಲಾ ಶನಿವಾರ ಮತ್ತು ರವಿವಾರದಂದು ಹೊರರೋಗಿ ಸೇವೆ ಲಭ್ಯವಿರುವುದಿಲ್ಲ. ಈ ಬದಲಾವಣೆ ಜು.31ರವರೆಗೆ ಮುಂದುವರಿಯಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ತಿಳಿಸಿದ್ದಾರೆ.

ಆದರೆ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗ ಶನಿವಾರ, ರವಿವಾರ ಸೇರಿದಂತೆ ವಾರದ ಎಲ್ಲಾ ದಿನಗಳಲ್ಲಿ ಎಂದಿನಂತೆ ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News