ಮೂಡುಬಿದಿರೆ: ರೆಡ್‌ಕ್ರಾಸ್‌ನಿಂದ ಸೊಳ್ಳೆ ಪರದೆ ವಿತರಣೆ

Update: 2020-07-13 17:18 GMT

ಮೂಡುಬಿದಿರೆ, ಜು.13: ಡೆಂಗ್ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಮೂಡುಬಿದಿರೆ ತಾಲೂಕಿನ ಪಾಲಡ್ಕ ಮತ್ತು ಬೆಳುವಾಯಿ ಗ್ರಾಮಗಳಲ್ಲಿ ಸೊಳ್ಳೆ ಪರದೆಗಳನ್ನು ವಿತರಿಸಲಾಯಿತು.

ಮೂಡುಬಿದಿರೆ ರೆಡ್‌ಕ್ರಾಸ್ ಘಟಕದ ಅಧ್ಯಕ್ಷೆಯಾಗಿರುವ ಮೂಡುಬಿದಿರೆ ತಹಶೀಲ್ದಾರ್ ಅನಿತಾಲಕ್ಷ್ಮೀ ಗ್ರಾಮಗಳ ಮನೆಗಳಿಗೆ ಭೇಟಿ ನೀಡಿ ಸೊಳ್ಳೆ ಪರದೆಗಳನ್ನು ಉಚಿತವಾಗಿ ವಿತರಿಸಿ ಮಾಸ್ಕ್ ಬಳಕೆ ಮತ್ತು ಶುಚಿತ್ವದ ಬಗ್ಗೆ ಕಿವಿಮಾತು ಹೇಳಿದರು.

 ಈ ವೇಳೆ ಅಂಧತ್ವದ ಕಾರಣದಿಂದ ಶಾಲೆಗೆ ಹೋಗಲು ಸಾಧ್ಯವಾಗದೆ ಮನೆಯಲ್ಲೇ ಉಳಿದಿರುವ ಹುಡುಗಿಯೊಬ್ಬಳನ್ನು ಸ್ವತಃ ತಹಶೀಲ್ದಾರರೇ ಗುರುತಿಸಿದರು. ಸರಕಾರದ ವತಿಯಿಂದ ಆಕೆಗೆ ಯಾವ ರೀತಿಯ ನೆರವು ನೀಡಬಹುದು ಎನ್ನುವುದನ್ನು ಪರಿಶೀಲಿಸುವ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News