ಪುದು: ಜು.14, 15ರಂದು ಇಡೀ ದಿನ ಅಂಗಡಿಗಳು ತೆರೆಯಲಿದೆ

Update: 2020-07-13 18:15 GMT

ಬಂಟ್ವಾಳ, ಜು.13: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 16ರಿಂದ ಲಾಕ್ ಡೌನ್ ಜಾರಿಗೆ ಬರುವ ಹಿನ್ನೆಲೆಯಲ್ಲಿ ಪುದು ಗ್ರಾಮದಲ್ಲಿ ಜುಲೈ 14 ಮತ್ತು 15ರಂದು ಬೆಳಗ್ಗೆ 6ರಿಂದ ರಾತ್ರಿ 8ರ ವರೆಗೆ ಎಲ್ಲಾ ಅಂಗಡಿಗಳು ತೆರಯಲಿದೆ ಎಂದು ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ತಿಳಿಸಿದ್ದಾರೆ. 

ಪುದು ಗ್ರಾಮದಲ್ಲಿ ಕೊರೋನ ಸೋಂಕು ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈ 10ರಿಂದ 14 ದಿನಗಳ ಕಾಲ ಮಧ್ಯಾಹ್ನ 2 ಗಂಟೆಯ ಬಳಿಕ  ಗ್ರಾಮದ ಎಲ್ಲಾ ಅಂಗಡಿಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡುವಂತೆ ಗ್ರಾಮ ಪಂಚಾಯತ್ ನಿಂದ ಮಾಡಿದ ಮನವಿಗೆ ಅಂಗಡಿ ಮಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದರೆ ಜುಲೈ 16ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿಯಾಗುವುದರಿಂದ ಜನರಿಗೆ ಅನುಕೂಲ ಆಗಲಿ ಎಂದು ಜುಲೈ 14, 15ರಂದು ಗ್ರಾಮದ ಎಲ್ಲಾ ಅಂಗಡಿಗಳನ್ನು ಬೆಳಗ್ಗೆಯಿಂದ ರಾತ್ರಿ ವರೆಗೆ ತೆರೆಯುವಂತೆ ಮನವಿ ಮಾಡಲಾಗಿದೆ. ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದು ರಮ್ಲಾನ್ ಮಾರಿಪಳ್ಳ ಪ್ರಕಟನೆಯಲ್ಲಿ ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News