ಬಂಟ್ವಾಳ: ಫರ್ನೀಚರ್ ಮಳಿಗೆಗೆ ಬೆಂಕಿ

Update: 2020-07-13 18:21 GMT

ಬಂಟ್ವಾಳ, ಜು.13: ಬಂಟ್ವಾಳ ಕೆಳಗಿನ ಪೇಟೆ ಸಮೀಪದ ಬಸ್ತಿಪಡ್ಪು ಎಂಬಲ್ಲಿ ಫರ್ನೀಚರ್ ಮಳಿಗೆಯೊಂದಕ್ಕೆ ಬೆಂಕಿ ತಗಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಸೋಮವಾರ ಮುಂಜಾನೆ ಸಂಭವಿಸಿದೆ. 

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಘಟನೆ ನಡೆದಿದೆ ಎನ್ನಲಾಗಿದ್ದು ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳದ ಸಿಬಂದಿ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯಿಂದ ಪೀಠೋಪಕರಣಗಳಿಗೆ ಸಿದ್ಧಪಡಿಸಲಾದ ಮರಗಳು ಬೆಂಕಿಗೆ ನಾಶವಾಗಿರುವ ಜತೆಗೆ ಸೋಫಾ ಸೆಟ್, ಫ್ಲೈವುಡ್ ಗಳಿಗೂ ಹಾನಿಯಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News