ಬ್ರಹ್ಮಾವರ: ಗದ್ದೆಯಲ್ಲಿ ಕುಸಿದು ಬಿದ್ದು ಕೃಷಿಕ ಮೃತ್ಯು
Update: 2020-07-13 18:25 GMT
ಬ್ರಹ್ಮಾವರ, ಜು.13: ಗದ್ದೆಯಲ್ಲಿ ಕೆಲಸ ಮಾಡಿಕೊಂಡಿದ್ದ ಕೃಷಿಕರೊಬ್ಬರು ಅಸ್ವಸ್ಥರಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಜು.12ರಂದು ಮಧ್ಯಾಹ್ನ ವೇಳೆ 34ನೇ ಕುದಿ ಗ್ರಾಮದ ತೋಟಂಬೈಲು ಎಂಬಲ್ಲಿ ನಡೆದಿದೆ.
ಮೃತರನ್ನು ತೋಟಂಬೈಲು ನಿವಾಸಿ ರಾಮ ನಾಯ್ಕ್ ಎಂಬವರ ಮಗ ನಾಗೇಶ್ ನಾಯ್ಕ್(33) ಎಂದು ಗುರುತಿಸಲಾಗಿದೆ.
ಮನೆಯ ಸಮೀಪದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಇವರು, ಅಲ್ಲಿಯೇ ಕುಸಿದು ಬಿದ್ದರೆನ್ನಲಾಗಿದೆ. ತೀವ್ರ ಅಸ್ವಸ್ಥಗೊಂಡು ಇವರು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.