ದ್ವಿತೀಯ ಪಿಯು ಫಲಿತಾಂಶ: ವಿಟ್ಲದ ಮರ್ಯಮತುಲ್ ಶಮ್ಲಾರಿಗೆ 96.16 ಶೇ. ಅಂಕ

Update: 2020-07-14 07:04 GMT

ವಿಟ್ಲ, ಜು.14: ಇಲ್ಲಿನ ವಿಠಲ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮರ್ಯಮತುಲ್ ಶಮ್ಲಾ 577 (96.16 ಶೇ.) ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಕಾಲೇಜಿಗೆ ಪ್ರಥಮ ಸ್ಥಾನಿ ಆಗಿದ್ದಾರೆ.

ಪಿಸಿಎಂಬಿ ಯಲ್ಲಿ 392 ಅಂಕ ಗಳಿಸಿ 98 ಶೇ. ಫಲಿತಾಂಶ ದಾಖಲಿಸಿದ್ದಾಳೆ.

ಫಿಸಿಕ್ಸ್ ಮತ್ತು ಮ್ಯಾಥಮೆಟಿಕ್ಸ್ ನಲ್ಲಿ ತಲಾ 100ಕ್ಕೆ 100 ಅಂಕ, ಇಂಗ್ಲಿಷ್ ನಲ್ಲಿ 95, ಹಿಂದಿಯಲ್ಲಿ 90, ಕೆಮಿಸ್ಟ್ರಿಯಲ್ಲಿ 96, ಬಯೋಲಜಿಯಲ್ಲಿ 96 ಅಂಕಗಳನ್ನು ಪಡೆದಿದ್ದಾರೆ.

ಶಮ್ಲಾವಿಟ್ಲ ಸೆರಂತಿಮಠ ನಿವಾಸಿ ಉಮರ್ ದಾರಿಮಿ ಪಟ್ಟೋರಿ ಹಾಗೂ ನಫೀಸತುಲ್ ಮುನೀರಾ ಅವರ ಪುತ್ರಿ. ಎಸ್ಸೆಸ್ಸೆಲ್ಸಿಯಲ್ಲಿ ಮರ್ಯಮತುಲ್ ಶಮ್ಲಾ 617 ಅಂಕ ದಾಖಲಿಸಿದ್ದರು.

ಇವರು ಮುಂದೆ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಮಾಡುವ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News