ದ್ವಿತೀಯ ಪಿಯು ಫಲಿತಾಂಶ: ಅಮನ್ ಫಾತಿಮಾಗೆ ವಿಶಿಷ್ಟ ಶ್ರೇಣಿ
Update: 2020-07-14 13:17 IST
ಉಡುಪಿ, ಜು.14: ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಬೆಂಗಳೂರು ಯಲಹಂಕದ ಜ್ಞಾನಜ್ಯೋತಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮನ್ ಫಾತಿಮಾ 547 (91.16 ಶೇ.) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಬಿಸಿನೆಸ್ ಸ್ಟಡೀಸ್‌ನಲ್ಲಿ 100 ಹಾಗೂ ಅಕೌಂಟೆನ್ಸಿಯಲ್ಲಿ 98 ಅಂಕಗಳನ್ನು ಗಳಿಸಿರುವ ಅಮನ್ ಫಾತಿಮಾ ಅವರು ಮೂಳೂರಿನ ಫಕೀರ್ ಅಹ್ಮದ್ ಹಾಗೂ ಮೈಮೂನಾ ದಂಪತಿಯ ಪುತ್ರಿ.