ಪಿಯುಸಿ ವಿಜ್ಞಾನ ವಿಭಾಗದಲ್ಲಿ ಉಡುಪಿಯ ಅಭಿಜ್ಞಾ ರಾವ್ ರಾಜ್ಯಕ್ಕೆ ಟಾಪರ್

Update: 2020-07-14 08:37 GMT

ಉಡುಪಿ, ಜು.14: ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಉಡುಪಿ ವಾದಿರಾಜ ಮೂರನೇ ಅಡ್ಡರಸ್ತೆಯ ನಿವಾಸಿ ಅಭಿಜ್ಞಾ ರಾವ್ 596 (ಶೇ.99.33) ಅಂಕಗಳೊಂದಿಗೆ ರಾಜ್ಯಕ್ಕೆ ಟಾಪರ್ ಆಗಿ ಮೂಡಿಬಂದಿದ್ದಾರೆ.

ಇವರು ಆಶಾ ರಾವ್ ಹಾಗೂ ದಿವಂಗತ ವಿಠಲ ರಾವ್ ದಂಪತಿ ಪುತ್ರಿ. ಈಕೆಯ ಅಕ್ಕ ರಕ್ಷಾ ರಾವ್ ಸುರತ್ಕಲ್ ಎನ್‌ಐಟಿಕೆಯಲ್ಲಿ ಇಂಜಿನಿಯರಿಂಗ್ ಮುಗಿಸಿದ್ದಾರೆ.

ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ, ಸಂಸ್ಕೃತ, ಕಂಪ್ಯೂಟರ್ ಸೈನ್ಸ್‌ನಲ್ಲಿ ತಲಾ 100 ಮತ್ತು ಇಂಗ್ಲಿಷ್‌ನಲ್ಲಿ 96 ಅಂಕ ಗಳಿಸಿದ್ದಾರೆ. ಅಭಿಜ್ಞಾ ರಾವ್ ಎಸೆಸೆಲ್ಸಿ ಪರೀಕ್ಷೆಯಲ್ಲೂ ಶೇ.99.8 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದರು.

''ತುಂಬಾ ಖುಷಿಯಾಯಿತು. ಎಲ್ಲರ ಪ್ರೋತ್ಸಾಹ ಹಾಗೂ ಕಾಲೇಜಿನ ಪರಿಸರ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಕೊರೋನ ಲಾಕ್‌ಡೌನ್ ನಿಂದಾಗಿ ನನಗೆ ಇಂಗ್ಲಿಷ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಕಷ್ಟು ಸಮಯ ದೊರೆಯಿತು. ಅದನ್ನು ನಾನು ಸದುಪಯೋಗಪಡಿಸಿಕೊಂಡೆ. ತುಂಬಾ ಓದಿದ್ದೇನೆ. ಇದರಿಂದ ಕೊರೋನ ಲಾಕ್‌ಡೌನ್ ನಂತರ ನಡೆದ ಪರೀಕ್ಷೆ ನನಗೆ ಸುಲಭವಾಯಿತು'' ಎಂದು ಅಭಿಜ್ಞಾ ರಾವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News