ಸಿಬ್ಬಂದಿಗೆ ಕೊರೋನ: ಉಡುಪಿ ನಗರಸಭೆ ಕಚೇರಿ ಸೀಲ್‌ಡೌನ್

Update: 2020-07-14 08:39 GMT

ಉಡುಪಿ, ಜು.14: ಉಡುಪಿ ನಗರಸಭೆಯ ಆರೋಗ್ಯ ಇಲಾಖೆಯ ಸಿಬ್ಬಂದಿಯೊಬ್ಬರಿಗೆ ಕೊರೋನ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ನಗರಸಭೆ ಕಚೇರಿ ಯನ್ನು ಇಂದು ಸೀಲ್‌ಡೌನ್ ಮಾಡಲಾಗಿದೆ.

ಕಳೆದ ಏಳು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಕಚೇರಿಗೆ ಗೈರು ಹಾಜರಾಗಿ ಮನೆಯಲ್ಲಿಯೇ ಇದ್ದರು. ಈ ಮಧ್ಯೆ ಕೊರೋನ ಪರೀಕ್ಷೆಗೆ ಒಳಗಾಗಿದ್ದ ಇವರ ವರದಿಯು ಜು.13ರಂದು ಪಾಸಿಟಿವ್ ಎಂಬುದಾಗಿ ಬಂದಿದೆ.

ಈ ಹಿನ್ನೆಲೆಯಲ್ಲಿ ನಗರಸಭೆ ಕಚೇರಿಯನ್ನು ಮೂರು ದಿನಗಳ ಕಾಲ ಬಂದ್ ಮಾಡಲಾಗಿದೆ. ಇಂದು ಇಡೀ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗುತ್ತದೆ ಮತ್ತು ಎಲ್ಲ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News