ದ್ವಿತೀಯ ಪಿಯು ಫಲಿತಾಂಶ: ಬಿಮೂಡ ಸ.ಪ.ಪೂ ಕಾಲೇಜಿಗೆ 16 ಡಿಸ್ಟಿಂಕ್ಷನ್, 86% ಫಲಿತಾಂಶ

Update: 2020-07-14 11:26 GMT

ಬಂಟ್ವಾಳ, ಜು.14: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಬಿ.ಮೂಡ ಸರಕಾರಿ ಪದವಿ ಪೂರ್ವ ಕಾಲೇಜು ಉತ್ತಮ ಫಲಿತಾಂಶ ದಾಖಲಿಸಿದೆ.

ವಾಣಿಜ್ಯ ವಿಭಾಗದಲ್ಲಿ 96% ವಿಜ್ಞಾನ ವಿಭಾಗದಲ್ಲಿ 81% ಹಾಗೂ ಕಲಾ ವಿಭಾಗದಲ್ಲಿ 78% ಫಲಿತಾಂಶ ಪಡೆದಿದ್ದು, ಒಟ್ಟು ಶೇ.86 ಫಲಿತಾಂಶ ದಾಖಲಿಸಿರುತ್ತದೆ. ಅಲ್ಲದೆ ಒಟ್ಟು 16 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 87 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

 ವಾಣಿಜ್ಯ ವಿಭಾಗದಲ್ಲಿ 12 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಶ್ವಿತಾ 566(94.33 ಶೇ.) ಅಂಕಗಳು (ಅರ್ಥಶಾಸ್ತ್ರ 100), ದೀಪ್ತಿ ಎನ್. 551(91.83 ಶೇ.) ಅಂಕಗಳು(ಲೆಕ್ಕಶಾಸ್ತ್ರ 100), ಗೌರವ್ 550(91.66 ಶೇ.) ಅಂಕಗಳು (ಇತಿಹಾಸ 100) ಹಾಗೂ ನವ್ಯಾ 550 (91.66 ಶೇ.) ಅಂಕಗಳನ್ನು ಪಡೆದಿರುತ್ತಾರೆ.

ಕಲಾ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಫಾತಿಮತ್ ನಿಶಾ 547 (91.16) ಅಂಕಗಳು (ಇತಿಹಾಸ 100), ಫಾತಿಮತ್ ಫರ್ವೀನಾ 537 (89.5 ಶೇ.) ಅಂಕಗಳು (ಇತಿಹಾಸ 100), ಹಾಗೂ  ಆಯಿಶತುಲ್ ಜಿಸ್ತಿಯಾ 528 ಅಂಕಗಳನ್ನು ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಮೂವರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮುರ್ಷಿದಾ ಬಾನು 522 ( ಗಣಿತ 100  ಅಂಕಗಳು), ಭವಿತ್ 516 ಅಂಕಗಳು ಹಾಗೂ ಮಹಮ್ಮದ್ ಆಸಿರ್ 512 ಅಂಕಗಳನ್ನು ಪಡೆದಿರುತ್ತಾರೆ.
ಕಲಾ ವಿಭಾಗದಲ್ಲಿ  73 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 57 ವಿದ್ಯಾರ್ಥಿಗಳು ಉತ್ತೀರ್ಣ, ವಾಣಿಜ್ಯ ವಿಭಾಗದಲ್ಲಿ 76 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 73 ವಿದ್ಯಾರ್ಥಿಗಳು ಉತ್ತೀರ್ಣ ಹಾಗೂ ವಿಜ್ಞಾನ ವಿಭಾಗದಲ್ಲಿ 21 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News