ಅಲ್ ಫುರ್ಖಾನ್ ಇಸ್ಲಾಮಿಕ್ ಪಿ.ಯು ಕಾಲೇಜಿಗೆ ಶೇ. 100 ಫಲಿತಾಂಶ: ಖತೀಜ ಕಬ್ಸ ಫರತ್ ಗೆ 98.2%

Update: 2020-07-14 14:23 GMT

ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೂಡಬಿದ್ರೆಯ ಅಲ್ ಫುರ್ಖಾನ್ ಇಸ್ಲಾಮಿಕ್ ಪಿ.ಯು ಕಾಲೇಜು ಶೇಕಡ 100 ಫಲಿತಾಂಶವನ್ನು ದಾಖಲಿಸಿದೆ. 

ವಿದ್ಯಾರ್ಥಿನಿ ಖತೀಜ ಕಬ್ಸ ಫರತ್ 589 (98.2%) ಅಂಕಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನಿ ಆಗಿದ್ದಾರೆ. ಫಿಸಿಕ್ಸ್ 100ಕ್ಕೆ 100 ಅಂಕ , ಕೆಮೆಸ್ಟ್ರಿ 99, ಅರಬಿಕ್ 99,  ಗಣಿತ 98, ಬಯಾಲಜಿ 97, ಇಂಗ್ಲೀಷ್ ನಲ್ಲಿ 96 ಅಂಕಗಳನ್ನು ಪಡೆದಿದ್ದಾರೆ. 

ಪರೀಕ್ಷೆ ಬರೆದ ಒಟ್ಟು 39 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 24 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳಾದ ಖತೀಜ ಕಬ್ಸ ಫರತ್, ಅಫ್ರ ಸಲಾಂ, ಅಝ್ರ ಅಫ್ ಹೀನ, ರಮ್ ಝೀನ ಎಸ್. ಸಯೀದ ಮುಹಮ್ಮದ್ ಮರೂಫ್, ಶೈಮ, ಶಿರೀನ್ ಖತೀಜ, ಆಯಿಶತ್ ರೈಹಾನ, ಅಸ್ಮಾ, ಫಾತಿಮ ಫಾಯಿಝ, ಹನಾನ್ ಫಾತಿಮ ಹಾಗೂ ಫಾತಿಮ ಝುಹ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರ್ ಮ್ಯಾನ್ ಯು.ಎಂ ಮೊಯಿದಿನ್ ಕುಂಞಿ, ನಿರ್ದೇಶಕಿ ಮುಮ್ತಾಝ್ ಬಿಂತ್ ಮೊಯಿದಿನ್ ಕುಂಞಿ, ಪ್ರಾಂಶುಪಾಲೆ ಶ್ರೀಮತಿ ನಝ್ರಾನ, ಉಪ ಪ್ರಾಂಶುಪಾಲೆ ಶ್ರೀಮತಿ ಅನೀಸಾ, ಆಡಳಿತಾಧಿಕಾರಿ ಮುಹಮ್ಮದ್ ಶಹಾಂ, ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News