ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಜೊತೆ ಪ್ರಥಮ ಸ್ಥಾನ ಕಾಯ್ದುಕೊಂಡ ದ.ಕ.ಜಿಲ್ಲೆ

Update: 2020-07-14 13:05 GMT

ಮಂಗಳೂರು, ಜು.14: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಳೆದ ವರ್ಷ ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿ ಗುರುತಿಸಿಕೊಂಡಿದ್ದ ದ.ಕ.ಜಿಲ್ಲೆ ಈ ಬಾರಿ ಶೇ. 90.71 ಫಲಿತಾಂಶದೊಂದಿಗೆ ಪ್ರಥಮ ಸ್ಥಾನಕ್ಕೆ ಏರಿದೆ. ಆದರೆ, ಶೇಕಡಾವಾರು ಪ್ರಮಾಣದಲ್ಲಿ ಕಳೆದ ವರ್ಷಕ್ಕಿಂತ ( ಶೇ. 90.91) ಈ ಬಾರಿ ಇಳಿಕೆಯಾಗಿದೆ.

 ಜಿಲ್ಲೆಯಲ್ಲಿ ಪರೀಕ್ಷೆ ಬರೆದ 34,287 ವಿದ್ಯಾರ್ಥಿಗಳ ಪೈಕಿ 29,494 ಮಂದಿ ತೇರ್ಗಡೆ ಹೊಂದಿದ್ದು, ಶೇ. 90.71ಲಿತಾಂಶ ದಾಖಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ 17,189 ವಿದ್ಯಾರ್ಥಿನಿಯರ ಪೈಕಿ 15,561 ಮಂದಿ ತೇರ್ಗಡೆ ಹೊಂದಿದ್ದರೆ, 17,098 ವಿದ್ಯಾರ್ಥಿಗಳ ಪೈಕಿ 13,933 ಮಂದಿ ತೇರ್ಗಡೆ ಹೊಂದಿದ್ದಾರೆ.

ರಾಜ್ಯದಲ್ಲಿ ದ.ಕ. ಜಿಲ್ಲೆಯ 20 ಮಂದಿ ವಿದ್ಯಾರ್ಥಿಗಳು 10ರೊಳಗಿನ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವಿಕಾಸ್ ಪಪೂ ಕಾಲೇಜಿನ ಅಪೂರ್ವಾ ಎಂ. 594 ಅಂಕಗಳೊಂದಿಗೆ ರಾಜ್ಯದಲ್ಲಿ ನಾಲ್ಕನೇ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

 ಉಳಿದಂತೆ ವಾಣಿಜ್ಯ ವಿಭಾಗದಲ್ಲಿ ನಗರದ ಶಾರದಾ ಪಪೂ ಕಾಲೇಜಿನ ಪೃಥ್ವಿ ಎನ್. ಹೆಬ್ಬಾರ್ (593), ಆಳ್ವಾಸ್ ಪಪೂ ಕಾಲೇಜಿನ ಹರ್ಷ ಜೆ. ಆಚಾರ್ಯ (593) ಅಂಕಗಳೊಂದಿಗೆ 5ನೇ ಸ್ಥಾನ, ಮೂಡುಬಿದಿರೆ ಜೈನ್ ಪಪೂ ಕಾಲೇಜಿನ ಎಂ. ಅಭಿಷೇಕ್ ರಾವ್ (592) ಅಂಕಗಳೊಂದಿಗೆ 6ನೇ ಸ್ಥಾನ, ಸೈಂಟ್ ಅಲೋಶಿಯಸ್ ಪಪೂ ಕಾಲೇಜಿನ ಅಮಿತ್ ಆಂಟೊನಿ ಸಲ್ಡಾನ (591) ಮತ್ತು ಪ್ರೀಮಾ ಮರಿಯಾ ಫೆರ್ನಾಂಡಿಸ್ (591), ಸುರತ್ಕಲ್ ಗೋವಿಂದ ದಾಸ ಪಪೂ ಕಾಲೇಜಿನ ಸ್ಮೃತಿ ದೇವದಾಸ್ ಕರ್ಕೇರ (591), ಮೂಡುಬಿದಿರೆ ಆಳ್ವಾಸ್ ಪಪೂ ಕಾಲೇಜಿನ ಈಶ್ವರ್ ವಿಜಯಸ್ವಾಮಿ ಎಲಿಗಾರ್ (591) ಶ್ರೇಯಾ ಕೆ. ಬಿ. (591) ಮತ್ತು ವಾಡ್ಗವೆ ಅಮೋಲ್ (591), ವಿಕಾಸ್ ಪಪೂ ಕಾಲೇಜಿನ ಕೆ. ರಕ್ಷಾ ಭಕ್ತ (591) ಮತ್ತು ಪ್ರಿಯಾಂಕಾ ಎಚ್. (591) ಅಂಕಗಳೊಂದಿಗೆ 7ನೇ ಸ್ಥಾನ, ಸೈಂಟ್ ಅಲೋಶಿಯಸ್ ಪಪೂ ಕಾಲೇಜಿನ ಶ್ರಾವ್ಯಾ (590), ಪುತ್ತೂರು ಸೈಂಟ್ ಫಿಲೋಮಿನಾ ಪಪೂ ಕಾಲೇಜಿನ ರಿತೇಶ್ ರೈ ಎಂ. (590) ಅಂಕಗಳೊಂದಿಗೆ 8ನೇ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಬಾಸ್ಕೋಸ್ ಕಾಲೇಜಿನ ಪೃಥ್ವಿ (593)ರಾಜ್ಯದಲ್ಲಿ 5ನೆ ಸ್ಥಾನ, ಅಳಿಕೆ ಸತ್ಯಸಾಯಿ ಲೋಕಸೇವಾ ಪಪೂ ಕಾಲೇಜಿನ ರಾಘವೇಂದ್ರ ಅಪ್ಪಣ್ಣ ಬಡಿಗೇರ್ (591) ಮತ್ತು ಶ್ರೀಶಕೃಷ್ಣ (591), ಪುತ್ತೂರು ಸೈಂಟ್ ಫಿಲೋಮಿನ ಪಪೂ ಕಾಲೇಜಿನ ಸುಧನ್ವ ಶ್ಯಾಂ ಎಸ್. (591) ಅಂಕಗಳೊಂದಿಗೆ 6ನೇ ಸ್ಥಾನ, ಪುತ್ತೂರು ವಿವೇಕಾನಂದ ಪಪೂ ಕಾಲೇಜಿನ ಅಂಕಿತಾ ಜಿ. (590), ಮಂಗಳೂರು ಎಕ್ಸೆಲೆಂಟ್ ಪಪೂ ಕಾಲೇಜಿನ ಪ್ರಗತಿ ಕೆ.ಎಸ್. (590) ಅಂಕಗಳೊಂದಿಗೆ 7ನೇ ಸ್ಥಾನ ಪಡೆದುಕೊಂಡಿದ್ದಾರೆ.

ಕಲಾ ವಿಭಾಗದಲ್ಲಿ ಉರ್ವ ಲೇಡಿಹಿಲ್ ವಿಕ್ಟೋರಿಯಾ ಸಂಯುಕ್ತ ಪಪೂ ಕಾಲೇಜಿನ ರಿಶೆಲ್ ಬ್ರೆಟ್ನಿ ಫೆರ್ನಾಂಡಿಸ್ (587) ಅಂಕಗಳೊಂದಿಗೆ 7ನೇ ಸ್ಥಾನ ಪಡೆದುಕೊಂಡಿದ್ದಾರೆ.

2013ರಿಂದ 2018ರವರೆಗಿನ ಲಿತಾಂಶಗಳಲ್ಲಿ ದ.ಕ. ಜಿಲ್ಲೆಯು ಪ್ರಥಮ ಅಥವಾ ದ್ವಿತೀಯ ಸ್ಥಾನವನ್ನು ಕಾಯ್ದುಕೊಳ್ಳುತ್ತಾ ಬಂದಿವೆೆ. 2013ರಲ್ಲಿ ಶೇ.91.76 ಲಿತಾಂಶದೊಂದಿಗೆ ದ್ವಿತೀಯ ಸ್ಥಾನ, 2014ರಲ್ಲಿ ಶೇ.86.4, 2015ರಲ್ಲಿ ಶೇ.93.09, 2016ರಲ್ಲಿ ಶೇ.90.48 ಲಿತಾಂಶದೊಂದಿಗೆ ಪ್ರಥಮ ಸ್ಥಾನ, 2017ರಲ್ಲಿ ಶೇ.89.92 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ, 2018ರಲ್ಲಿ ಶೇ.91.49 ಲಿತಾಂಶದೊಂದಿಗೆ ಪ್ರಥಮ ಸ್ಥಾನ ಮತ್ತು 2019ರಲ್ಲಿ ಶೇ.90.91 ಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಪಡೆದಿತ್ತು. ಆದರೆ ಈ ಬಾರಿ 90.71 ಫಲಿತಾಂಶ ದಾಖಲಿಸಿ ಉಡುಪಿ ಜಿಲ್ಲೆಯೊಂದಿಗೆ ಸಮಬಲ ಸಾಧಿಸಿದೆ.

ಶೇಕಡಾವಾರು ಫಲಿತಾಂಶದಲ್ಲಿ ಇಳಿಕೆ

ದ.ಕ.ಜಿಲ್ಲೆಯ 53 ಸರಕಾರಿ ಮತ್ತು 149 ಖಾಸಗಿ ಪಿಯು ಕಾಲೇಜಿನ 17,098 ಮಂದಿ ವಿದ್ಯಾರ್ಥಿಗಳು ಹಾಗೂ 17,189 ವಿದ್ಯಾರ್ಥಿನಿಯರ ಸಹಿತ ಒಟ್ಟು 34,287 ಮಂದಿ ಪರೀಕ್ಷೆ ಬರೆದಿದ್ದರು. ಆ ಪೈಕಿ 29,494 ಮಂದಿ ಉತ್ತೀರ್ಣರಾಗಿದ್ದಾರೆ. ಅದರಲ್ಲಿ 27,970 ಮಂದಿ ಮೊದಲ ಬಾರಿಗೆ ಹಾಗೂ 1085 ಮಂದಿ ಖಾಸಗಿ, 439 ಮಂದಿ ಪುನರಾವರ್ತಿತ ಅಭ್ಯರ್ಥಿಗಳಾಗಿದ್ದಾರೆ. ಉತ್ತೀರ್ಣರಾದ ಒಟ್ಟು ವಿದ್ಯಾರ್ಥಿಗಳ ಪೈಕಿ 25,401 ಮಂದಿ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದವರಾದರೆ, 4,093 ಮಂದಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು.

ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ 13,933 ಹುಡುಗರು ಮತ್ತು 15,561 ಹುಡುಗಿಯರು ಸೇರಿದ್ದಾರೆ. ಪರೀಕ್ಷೆ ಹಾಜರಾತಿಯಲ್ಲಿ ಹುಡುಗರ ಸಂಖ್ಯೆ 17,098 ಇದ್ದರೆ, ಹುಡುಗಿಯರ ಸಂಖ್ಯೆ 17,189 ಇತ್ತು. ತೇರ್ಗಡೆ ಹೊಂದಿದ ಹುಡುಗರ ಸಾಧನೆ ಶೇ.81.49 ಆಗಿದ್ದರೆ, ಹುಡುಗಿಯರ ಸಾಧನೆ 90.53 ಆಗಿದೆ.

ಒಟ್ಟಾರೆ ಫಲಿತಾಂಶದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಇಳಿಕೆಯಾಗಿದೆ. ಕಳೆದ ವರ್ಷ ಶೇ. 90.91 ಫಲಿತಾಂಶ ಜಿಲ್ಲೆಗೆ ಬಂದಿದ್ದರೆ, ಈ ಬಾರಿಶೇ. 90.71 ಲಿತಾಂಶ ಬಂದಿದೆ. ಆದರೆ ಕಳೆದ ವರ್ಷ ದ್ವಿತೀಯ ಸ್ಥಾನದಲ್ಲಿದ್ದ ದ.ಕ. ಜಿಲ್ಲೆ ಈ ಬಾರಿ ಉಡುಪಿಯೊಂದಿಗೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿದೆ.

ಹುಡುಗಿಯರೇ ಮೇಲುಗೈ

 ಫಲಿತಾಂಶದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 17,189 ಮಂದಿ ವಿದ್ಯಾರ್ಥಿನಿಯರ ಪೈಕಿ 15561 ಮಂದಿ ಉತ್ತೀರ್ಣರಾಗಿದ್ದಾರೆ. 17098 ಮಂದಿ ಹುಡುಗರು ಹಾಜರಾಗಿದ್ದು, 13,933 ಮಂದಿ ಪಾಸಾಗಿದ್ದಾರೆ.

►ಇಂಗ್ಲಿಷ್ ಮಾಧ್ಯಮದ 28,166 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ, 25,401 ಮಂದಿ ತೇರ್ಗಡೆ ಹೊಂದಿದ್ದಾರೆ.

►ಕನ್ನಡ ಮಾಧ್ಯಮದ 6,121 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ, 4,093 ಮಂದಿ ತೇರ್ಗಡೆ ಹೊಂದಿದ್ದಾರೆ.

►ಕಲಾ ವಿಭಾಗದಲ್ಲಿ 4,515 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 2,931 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ.64.92 ಸಾಧನೆಗೈದಿದ್ದಾರೆ.

►ವಾಣಿಜ್ಯ ವಿಭಾಗದಲ್ಲಿ 16,202 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 13,849 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ.85.48 ಸಾಧನೆಗೈದಿದ್ದಾರೆ.

►ವಿಜ್ಞಾನ ವಿಭಾಗದಲ್ಲಿ 13,570 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 12,714 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ.93.69 ಸಾಧನೆಗೈದಿದ್ದಾರೆ.

►ನಗರ ವ್ಯಾಪ್ತಿಯ 22,325 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 19,942 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ.89.33 ಸಾಧನೆಗೈದಿದ್ದರೆ, ಗ್ರಾಮಾಂತರ ವ್ಯಾಪ್ತಿಯ 11,962 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 9,552 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಶೇ.79.85 ಸಾಧನೆಗೈದಿದ್ದಾರೆ.

►ಕಳೆದ ನಾಲ್ಕು ವರ್ಷಗಳ ಫಲಿತಾಂಶ

ವರ್ಷ ಫಲಿತಾಂಶ

2017 ಶೇ. 89.92

2018 ಶೇ. 91.49

2019 ಶೇ. 90.91

2020 ಶೇ. 90.71

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News