ದ್ವಿತೀಯ ಪಿಯು ಫಲಿತಾಂಶ: ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿಗೆ ಶೇ.99.79 ಫಲಿತಾಂಶ

Update: 2020-07-14 16:42 GMT

ಮಂಗಳೂರು: ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪಪೂ ಕಾಲೇಜು ದ್ವಿತೀಯ ಪಿಯು ಶೇ.99.79 ಫಲಿತಾಂಶ ದಾಖಲಿಸಿದೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ವಿವೇಕ್ ಎ. ಬಿ. ಮತ್ತು ಚೇತನ್ ಕೆ.ಸಿ. ತಲಾ 591 ಅಂಕಗಳನ್ನು ಗಳಿಸಿ ಕಾಲೇಜಿಗೆ ಮೊದಲ ಹಾಗೂ ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ ಹಾಗೂ ಪ್ರಗತಿ ಕೆಎಸ್ 590 ಗಳಿಸಿ ದ್ವಿತೀಯ ಹಾಗೂ ರಾಜ್ಯಮಟ್ಟದಲ್ಲಿ 7 ನೇ ಸ್ಥಾನವನ್ನು ಗಳಿಸಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ ಬಂದಿದ್ದು, ಅಭಿಜಿತ್ ರಾಜೇಂದ್ರ ಜೋಶಿ 589 ಅಂಕಗಳಿಸಿ ರಾಜ್ಯಮಟ್ಟದಲ್ಲಿ 9ನೇ ಸ್ಥಾನವನ್ನು ಪಡೆದಿರುತ್ತಾರೆ. ಕಾಲೇಜಿನ 478 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ 281 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 189 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 46 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 93 ವಿದ್ಯಾರ್ಥಿಗಳು ವಿಷಯವಾರು 100ಕ್ಕೆ 100 ಅಂಕಗಳನ್ನು ಗಳಿಸಿರುತ್ತಾರೆ.

ವಿಜ್ಞಾನ ಭಾಗದಲ್ಲಿ ಅನೀಶ್ (586), ಸಿಂಚನಾ (583), ಸಹನಾ ಶ್ರೀಶೈಲ್ ಪಾಟೀಲ್ (583), ಗೌರಿ ವೈ (583), ಅಕ್ಷಯ್ ಪ್ರಭಾಕರ್ ಭಾಗವತ್ (582), ಮದನ್ ವೈ.ಎನ್ (581), ಸಂದೇಶ್ ಲೋಕೇಶ್ ಕೊಟ್ಟಾರಿ (581), ರಾಕೇಶ್ ಜಿಬಿ (581) ಹಾಗೂ ಶ್ರೀನಿಧಿ ಶೆಟ್ಟಿ (580) ಮತ್ತು ವಾಣಿಜ್ಯ ವಿಭಾಗದಲ್ಲಿ ಹೃದಯ್ ಆರ್. (586), ವಿನ್ಸಂಟ್ (583) ಹಾಗೂ ಶರತ್ (580) ಅಂಕಗಳನ್ನು ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News