ಗ್ರಾಮ ಸಹಾಯಕಗೆ ಕೊರೋನ: ಉಡುಪಿ ತಾಲೂಕು ಕಚೇರಿ ಬಂದ್

Update: 2020-07-14 15:27 GMT

ಉಡುಪಿ, ಜು.14: ಉಡುಪಿ ತಾಲೂಕು ಕಚೇರಿಗೆ ಬಂದು ಹೋಗಿರುವ ಗ್ರಾಮ ಸಹಾಯಕರೊಬ್ಬರಿಗೆ ಕೊರೋನ ಪಾಸಿಟಿವ್ ಬಂದಿರುವುದು ಇಂದು ಧೃಡಪಟ್ಟಿದೆ.

ಹಿರೇಬೆಟ್ಟುವಿನ ಇವರಿಗೆ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರ ಪತ್ನಿಯ ಮೂಲಕ ಬಂದಿರಬಹುದೆಂದು ಶಂಕಿತಲಾಗಿದೆ. ಈ ಹಿನ್ನೆಲೆಯಲ್ಲಿ ಇವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಕರ್ತವ್ಯ ನಿಮಿತ್ತ ಇವರು ತಾಲೂಕು ಕಚೇರಿಗೆ ಆಗಮಿಸಿರುವುದರಿಂದ ಜು.15ರಂದು ಕಚೇರಿಯನ್ನು ಬಂದ್ ಮಾಡಿ ಸ್ಯಾನಿಟೈಸ್ ಮಾಡಲಾಗುವುದು ಎಂದು ಪ್ರಭಾರ ತಹಶೀಲ್ದಾರ್ ಮುಹಮ್ಮದ್ ಇಸಾಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News