ಉರ್ವಸ್ಟೋರ್ ಸುಂಕದಕಟ್ಟೆ ಡಿಸಿ ಮನ್ನಾ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ದೂರು

Update: 2020-07-14 17:33 GMT

ಮಂಗಳೂರು, ಜು.14: ನಗರ ಹೊರವಲಯದ ಉವರ್ರ್ಸ್ಟೋರ್‌ನ ಸುಂಕದಕಟ್ಟೆ ಪ್ರದೇಶದಲ್ಲಿರುವ ಡಿಸಿ ಮನ್ನಾ ಜಾಗದಲ್ಲಿ ಅಕ್ರಮವಾಗಿ ಕಟ್ಟಡವೊಂದನ್ನು ಕಟ್ಟಲಾಗುತ್ತಿದ್ದು,ಇದರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಯು ದ.ಕ.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ದೇರೇಬೈಲು ಗ್ರಾಮದ ಸರ್ವೆ ನಂಬ್ರ 174/7ಎರಲ್ಲಿ 0.10 ಸೆಂಟ್ಸ್ ಜಮೀನು ಡಿಸಿ ಮನ್ನಾ ಆಗಿದೆ. ಅದನ್ನು ಯಾರೂ ಪರಭಾರೆ ಮಾಡುವಂತಿಲ್ಲ. ಆದರೆ ಈ ಆಸ್ತಿಯ ಭೂ ಪರಿವರ್ತನೆ, ಸಿಂಗಲ್‌ಸೈಟ್ ಆಗಿದೆಯಲ್ಲದೆ ಇದೀಗ ಅಕ್ರಮವಾಗಿ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಮಂಗಳೂರು ಮನಪಾ ಕಟ್ಟಡ ಕಟ್ಟಲು ಪರವಾನಿಗೆ ನೀಡಿದೆ. ಇದು ಕಾನೂನು ಬಾಹಿರವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ದಸಂಸ ಜಿಲ್ಲಾ ಪ್ರಧಾನ ಸಂಚಲಕ ಜಗದೀಶ್ ಪಾಂಡೇಶ್ವರ ಮತ್ತು ಸಂಘಟನಾ ಸಂಚಾಲಕ ಸದಾಶಿವ ಉರ್ವಸ್ಟೋರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News