ಪಿಯುಸಿ: ಸುಳ್ಯದ ರಫಾನಾ ಪಿಸಿಎಂಬಿಯಲ್ಲಿ ಶೇ.98 ಫಲಿತಾಂಶ

Update: 2020-07-14 17:49 GMT

ಮಂಗಳೂರು, ಜು.14: ಸುಳ್ಯ ಕೆವಿಜಿ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮರಿಯಂ ರಫಾನಾ ಎಸ್.ಎ. 583 ಅಂಕ ಪಡೆದಿದ್ದಾರೆ. ಪಿಸಿಎಂಬಿಯಲ್ಲಿ 393 ಅಂಕ ಪಡೆದು ಶೇ.98 ಫಲಿತಾಂಶ ದಾಖಲಿಸಿದ್ದಾರೆ.

ಭೌತಶಾಸ್ತ್ರ ಮತ್ತು ಗಣಿತದಲ್ಲಿ ತಲಾ 100ಕ್ಕೆ 100 ಅಂಕ, ಇಂಗ್ಲಿಷ್-95, ಹಿಂದಿ-95, ರಸಾಯನಶಾಸ್ತ್ರ-98, ಜೀವಶಾಸ್ತ್ರದಲ್ಲಿ 95 ಅಂಕ ಪಡೆದಿದ್ದಾಳೆ. ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ರಫಾನಾ, ಸುಳ್ಯ ಕೆ.ಪಿ. ಅಬ್ದುಲ್ ರಹಿಮಾನ್ (ವಾಚ್ ಬಾಬಚ್ಚ) ಹಾಗೂ ಜೊಹರಾ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News