ಆನ್ಲೈನ್ ಕ್ಲಾಸ್: ಕೇಂದ್ರ ಸರಕಾರದಿಂದ ಶಾಲೆಗಳಿಗೆ ಮಾರ್ಗಸೂಚಿ

Update: 2020-07-14 18:11 GMT

ಹೊಸದಿಲ್ಲಿ, ಜು.14: ಶಾಲೆಯಿಂದ ನಡೆಸುವ ಆನ್ಲೈನ್ ತರಗತಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವರು ಮಂಗಳವಾರ ಮಾರ್ಗಸೂಚಿ ಘೋಷಿಸಿದ್ದಾರೆ ಹಾಗೂ ಪ್ರತಿ ದಿನ ವಿದ್ಯಾರ್ಥಿಗಳಿಗೆ ನಡೆಸಬೇಕಾದ ಅವಧಿ ಹಾಗೂ ತರಗತಿಯ ಸಂಖ್ಯೆಯನ್ನು ಶಿಫಾರಸು ಮಾಡಿದ್ದಾರೆ.

ಶಾಲೆಗಳು ಆನ್ಲೈನ್ ತರಗತಿಳನ್ನು ನಿಯಮಿತ ತರಗತಿಯ ರೀತಿಯಲ್ಲೇ ನಡೆಸುವುದರಿಂದ ಮಕ್ಕಳು ಅಂತರ್ಜಾಲದಲ್ಲಿ ಕಾಲ ಕಳೆಯುವ ಸಂದರ್ಭ ಹೆಚ್ಚುತ್ತದೆ ಎಂದು ಪಾಲಕರು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವಾಲಯ ಈ ಮಾರ್ಗಸೂಚಿಯನ್ನು ರೂಪಿಸಿದೆ.

‘ಪ್ರಗ್ಯಾತ್’ ಎಂದು ಕರೆಯಲಾಗುವ ಈ ಮಾರ್ಗಸೂಚಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪೂರ್ವ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಆನ್ಲೈನ್ ತರಗತಿಯ ಅವಧಿ 30 ನಿಮಿಷಗಳನ್ನು ಮೀರಬಾರದು ಎಂದು ಶಿಫಾರಸು ಮಾಡಿದೆ.

1ನೇ ತರಗತಿಯಿಂದ 8ನೇ ತರಗತಿ ವರಗೆ 45 ನಿಮಿಷಗಳ ಎರಡು ಆನ್ಲೈನ್ ತರಗತಿ, 9ರಿಂದ 12ನೇ ತರಗತಿ ವರೆಗೆ 30ರಿಂದ 45 ನಿಮಿಷಗಳ ನಾಲ್ಕು ತರಗತಿಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಶಿಫಾರಸು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News