ಪುತ್ತೂರು: ಸರ್ಕಾರಿ ಆಸ್ಪತ್ರೆಗೆ ಕೃತಕ ಉಸಿರಾಟದ ಸಾಧನ ಹಸ್ತಾಂತರ

Update: 2020-07-14 18:17 GMT

ಪುತ್ತೂರು: ಇತ್ತೀಚೆಗೆ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಧ್ಯಾಪಕವೃಂದ ಅವಿಷ್ಕರಿಸಿದ `ವಿವೇಕ ಜೀವವರ್ಧಕ' ಕೃತಕ ಉಸಿರಾಟದ ಸಾಧನವನ್ನು ತಾಲೂಕಿನ ಎಲ್ಲಾ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಉಚಿತವಾಗಿ ಕೊಡಲಾಗುತ್ತಿದ್ದು,  ಮಂಗಳವಾರ ಪುತ್ತೂರು ಸರಕಾರಿ ಆಸ್ಪತ್ರೆಗೆ ಶಾಸಕ ಸಂಜೀವ ಮಠಂದೂರು ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.

ಅನಿವಾಸಿ ಹಿರಿಯ ವಿದ್ಯಾರ್ಥಿಗಳ ಸಹಕಾರ: ಸುಮಾರು ರೂ. 16ಸಾವಿರ ವೆಚ್ಚ ತಗಲುವ 'ವಿವೇಕ ಜೀವವರ್ಧಕ' ಕೃತಕ ಉಸಿರಾಟದ ಸಾಧನವನ್ನು ಆಸ್ಪತ್ರೆಗಳಿಗೆ ಉಚಿತವಾಗಿ ನೀಡಲು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಮುಂದೆ ಬಂದಿದ್ದು, ಇದಕ್ಕೆ ತಗಲುವ ವೆಚ್ಚವನ್ನು ವಿದ್ಯಾ ಸಂಸ್ಥೆಯ ಅನಿವಾಸಿ ಹಿರಿಯ ವಿದ್ಯಾರ್ಥಿಗಳು ನೀಡಲಿದ್ದಾರೆ. 

ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆಶಾ ಜ್ಯೋತಿ ಪುತ್ತೂರಾಯ, ಡಾ. ಜಯದೀಪ್ ಅವರು ವೆಂಟಿಲೇಟರನ್ನು ಪಡೆದು ಕೊಂಡರು. 

ಈ ಸಂದರ್ಭದಲ್ಲಿ ಕಾಲೇಜಿನ ನಿರ್ದೇಶಕ ರವಿಕೃಷ್ಣ ಭಟ್ ಕಲ್ಲಾಜೆ, ಉಪನ್ಯಾಸಕರಾದ ಪ್ರೊ. ಎಮ್.ಎಲ್.ಸುದರ್ಶನ್, ಪ್ರೊ. ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News