ದ್ವಿತೀಯ ಪಿಯುಸಿ ಪರೀಕ್ಷೆ: ತುಂಬೆ ಕಾಲೇಜಿಗೆ ಶೇ. 95% ಫಲಿತಾಂಶ

Update: 2020-07-14 18:29 GMT
ಅಫ್ರಾ, ಫಾತಿಮ ನಿಶಾ, ಹೀನಾ

ಬಂಟ್ವಾಳ: ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಹಾಜರಾದ ತುಂಬೆ ಬಿ.ಎ. ಪದವಿ ಪೂರ್ವ ಕಾಲೇಜಿನ 118 ವಿದ್ಯಾರ್ಥಿಗಳಲ್ಲಿ 112 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95% ಫಲಿತಾಂಶ ಬಂದಿದೆ.  ಕಲಾ ವಿಭಾಗದಲ್ಲಿ17 ವಿದ್ಯಾರ್ಥಿಗಳು ಹಾಜರಾಗಿದ್ದು,15 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ 88% ಫಲಿತಾಂಶ ಬಂದಿದೆ.  ಅಫ್ರಾ 510 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ68 ವಿದ್ಯಾರ್ಥಿಗಳು ಹಾಜರಾಗಿದ್ದು, 65 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.95% ಫಲಿತಾಂಶ ಬಂದಿದೆ. ಫಾತಿಮ ನಿಶಾ 554 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ35 ವಿದ್ಯಾರ್ಥಿಗಳು ಹಾಜರಾಗಿದ್ದು, 34 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿ97% ಫಲಿತಾಂಶ ಪಡೆದಿದ್ದು, ಹೀನಾ 546 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಕಾಲೇಜಿನ ಮೂರು ವಿಭಾಗದಲ್ಲಿ17 ಮಂದಿ ಉನ್ನತ ಶ್ರೇಣಿ, 64 ವಿದ್ಯಾರ್ಥಿಗಳು ಪ್ರಥಮದರ್ಜೆ, 25 ಮಂದಿ ದ್ವಿತೀಯದರ್ಜೆ ಹಾಗೂ 06 ಮಂದಿ ತೃತೀಯದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News