ಎಚ್ಐವಿ, ಕ್ಷಯ, ಮಲೇರಿಯ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ: ಅಧ್ಯಯನ ವರದಿ

Update: 2020-07-14 20:06 GMT

ಲಂಡನ್, ಜು. 14: ಬಡ ಮತ್ತು ಮಧ್ಯಮ ಆದಾಯದ ದೇಶಗಳ ದುರ್ಬಲ ಆರೋಗ್ಯ ರಕ್ಷಣೆ ವ್ಯವಸ್ಥೆಗಳು ಈಗಾಗಲೇ ಕೋವಿಡ್-19 ಸಾಂಕ್ರಾಮಿಕದ ದಾಳಿಗೆ ಸಿಲುಕಿ ನಲುಗಿ ಹೋಗಿರುವುದರಿಂದ ಆ ದೇಶಗಳಲ್ಲಿ ಎಚ್ಐವಿ, ಕ್ಷಯ ಮತ್ತು ಮಲೇರಿಯಗಳಿಂದಾಗಿ ಸಂಭವಿಸುವ ಸಾವುಗಳ ಸಂಖ್ಯೆಯಲ್ಲಿ ಏರಿಕೆಯಾಗಬಹುದು ಎಂದು ಅಧ್ಯಯನವೊಂದು ಸೋಮವಾರ ತಿಳಿಸಿದೆ.

ಮುಂದಿನ ಐದು ವರ್ಷಗಳಲ್ಲಿ ಈ ಮೂರು ಕಾಯಿಲೆಗಳಿಂದಾಗಿ ಸಂಭವಿಸುವ ಸಾವಿನ ಪ್ರಮಾಣವು ಕ್ರಮವಾಗಿ 10ಶೇಕಡ, 20 ಶೇಕಡ ಮತ್ತು 36 ಶೇಕಡಗಳಷ್ಟು ಹೆಚ್ಚಾಗಬಹುದು. ಈ ಮೂರು ಕಾಯಿಲೆಗಳಿಂದಾಗಿ ಸಂಭವಿಸುವ ಸಾವಿನ ಪ್ರಮಾಣವು ಕೊರೋನ ವೈರಸ್ನಿಂದಾಗಿ ಸಂಭವಿಸುವ ಸಾವಿನಷ್ಟೇ ಇರಬಹುದು ಎನ್ನುವುದನ್ನು ಅಧ್ಯಯನ ಕಂಡುಕೊಂಡಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News