ಲಾಕ್ಡೌನ್ ಹಿನ್ನೆಲೆ: ಪಣಂಬೂರು ಬೀಚ್ ಬಳಿ ತಾಜಾ ಮೀನು ಮಾರಾಟ ಭರಾಟೆ

Update: 2020-07-15 10:06 GMT

ಮಂಗಳೂರು, ಜು.15: ಪಣಂಬೂರು ಬೀಚ್ ಬಳಿ ಬುಧವಾರ ರಾಶಿರಾಶಿ ಮೀನು ಮಾರಾಟದ ಜತೆಗೆ ಖರೀದಿಗೂ ಭಾರೀ ಜನಜಂಗುಳಿ ಕಂಡುಬಂದವು.

ಲಾಕ್ಡೌನ್ ಕಾರಣದಿಂದ ನಾಳೆಯಿಂದ ಮೀನು ಅಲಭ್ಯವಾಗಬಹುದು, ಖರೀದಿ ಅಸಾಧ್ಯ ಎಂಬ ಕಾರಣಕ್ಕೆ ತಾಜಾ ಮೀನು ಖರೀದಿಸಲು ಜನರು ಹಾಗೂ ಮಾರಾಟಗಾರರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಮೀನು ಖರೀದಿಸಿದರು.

ನಾಡದೋಣಿಗಳಲ್ಲಿ ಹಿಡಿಯಲಾದ ತಾಜಾ ಬಂಗುಡೆ, ಬೆರಕೆ, ಸಿಗಡಿ, ಮಾಂಜಿ ಮೀನನ್ನು ಖರೀದಿದಾರರು ಬೆಲೆಯನ್ನು ಲೆಕ್ಕಿಸದೆ ಖರೀದಿಸಿದರು.

ಸಂಜೆಯ ವೇಳೆಗೆ ಮೀನು ಖರೀದಿ ಸ್ಥಳಕ್ಕೆ ವಿಧಾನ ಪರಿಷತ್ ನ ಮಾಜಿ ಸದಸ್ಯ ರೂ ಆಗಮಿಸಿ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News