ಸಿಬಿಎಸ್‌ಸಿ: ಲಿಟ್ಲ್‌ರಾಕ್ ಶಾಲೆ‌ಗೆ ಶೇ.100 ಫಲಿತಾಂಶ

Update: 2020-07-15 12:43 GMT
ಅನಿರುದ್ಧ್ ರಾವ್, ಆಯುಷ್ ಶೆಟ್ಟಿ

ಬ್ರಹ್ಮಾವರ, ಜು.15: ಸೋಮವಾರ ಪ್ರಕಟಗೊಂಡ ಸಿಬಿಎಸ್‌ಇಯ ಹನ್ನೆರಡನೇ ತರಗತಿ ಫಲಿತಾಂಶದಲ್ಲಿ ಬ್ರಹ್ಮಾವರದ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ಶೇ.100 ತೇರ್ಗಡೆಯ ಸಾಧನೆ ಮಾಡಿದೆ.

ಶಾಲೆಯಿಂದ ಹಾಜರಾದ 98 ವಿದ್ಯಾರ್ಥಿಗಳಲ್ಲಿ 41 ಮಂದಿ ಶೇ.90ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. 41ಮಂದಿ ಶೇ.80ರಿಂದ 89, 15 ವಿದ್ಯಾರ್ಥಿಗಳು ಶೇ.70ರಿಂದ 79 ಹಾಗೂ ಓರ್ವ ವಿದ್ಯಾರ್ಥಿ ಶೇ.60 ರಿಂದ 69ರಷ್ಟು ಅಂಕ ಗಳಿಸಿದ್ದಾನೆ.

ಜೀವಶಾಸ್ತ್ರ ಸಂಯೋಜನೆಯಲ್ಲಿ ಶೇ.98 ಅಂಕ ಗಳಿಸಿದ ಅನಿರುದ್ಧ್ ರಾವ್, ಕಂಪ್ಯೂಟರ್ ಜ್ಞಾನ ಸಂಯೋಜನೆಯಲ್ಲಿ ಆಯುಷ್ ಶೆಟ್ಟಿ ಶೇ.97ಅಂಕಗಳನ್ನು ಗಳಿಸಿದ್ದಾರೆ.

ಲಿಟ್ಲ್‌ರಾಕ್ ಸ್ಕೂಲ್ ಕಳೆದ 25 ವರ್ಷಗಳಿಂದ ನಿರಂತರವಾಗಿ ಶೇ.100 ಫಲಿತಾಂಶ ಪಡೆಯುತ್ತಿರುವುದು ವಿಶೇಷವಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತಾಧಿಕಾರಿ ಪ್ರೊ.ಮ್ಯಾಥ್ಯೂ ಸಿ ನೈನಾನ್ ಮತ್ತು ಪ್ರಾಂಶುಪಾಲ ಡಾ.ಜಾನ್ ಥಾಮಸ್ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News