ದ್ವಿತೀಯ ಪಿಯುಸಿ: ಶಕ್ತಿ ಪಿಯು ಕಾಲೇಜಿಗೆ ಶೇ.100 ಫಲಿತಾಂಶ

Update: 2020-07-15 13:32 GMT

ಮಂಗಳೂರು, ಜು.15: ಶಕ್ತಿನಗರದ ಶಕ್ತಿ ಪದವಿ ಪೂರ್ವ ಕಾಲೇಜಿನ ಮೊದಲ ಬ್ಯಾಚ್‌ನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಶೇ.100 ಫಲಿತಾಂಶದೊಂದಿಗೆ ತೇರ್ಗಡೆಯಾಗಿದ್ದಾರೆ.

ಶಕ್ತಿ ಪಪೂ ಕಾಲೇಜಿನಲ್ಲಿ 22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ ಎಂಟು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಹಾಗೂ 14 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಮೂಲಕ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ.

ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಪ್ರಿಯಾ ವಿಯೋಣ ಡಿಸಿಲ್ವ, ಸಂಕಲ್ಪ ಗಿರೀಶ್, ಶರತ್ ಕುಮಾರ್, ಖತೀಜಾ ರಹೀಫಾ, ರಹೀಲ್ ಉಮರ್ ಫಾರೂಕ್ ಅಬ್ಬು, ತುಷಾರ್, ಖದೀಜಾ ಸಾಹಮ, ಕೆ.ಟಿ. ತರುಣ್ ಅಯ್ಯಪ್ಪ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಅಕ್ಷಯ ಆರ್ಚಾಯ ಬಿ., ಅನಿಲ್‌ಕುಮಾರ್ ಎಸ್., ಋತ್ವಿಕ್ ಕೆ.ಟಿ., ಕೆ.ಎಸ್. ವರುಣ್, ಮಧುರಾಜ್ ಪಿ.ಸಿ, ನಝೀಲ ಫಾತಿಮಾ, ಪ್ರತೀಕ್ ಎಸ್., ರಜತ್ ಆರ್. ಗುಜರಾನ್, ಋತ್ವಿಕ್, ರಿಝಾ ಬಸೀರ್, ಸಾನೀಯ ಇರಾಂ, ಶ್ರೇಯಸ್ ಸೋಮಣ್ಣ ಪಿ.ಬಿ., ಸೈಯದ್ ಮುಹಮ್ಮದ್ ಮೂಸಾ, ವಿಭಾ ಎಸ್. ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಹಾಗೂ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಲಾಯಿತು. ಅಂಥ ಎಲ್ಲ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಸಂಸ್ಥೆಯಿಂದ ತೇರ್ಗಡೆಯಾದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ. ಕೆ.ಸಿ. ನಾಕ್, ಕಾರ್ಯದರ್ಶಿ ಸಂಜೀತ್ ನಾಕ್, ಪ್ರಧಾನ ಸಲಹೆಗಾರ ರಮೇಶ್ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲ ಪ್ರಭಾಕರ ಜಿ.ಎಸ್., ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್ ಅಭಿನಂದಿಸಿರುವುದಾಗಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News