ದ.ಕ. ಜಿಲ್ಲಾ ಎಸ್ಸೆಸ್ಸೆಫ್ ನಿಂದ ಕೋವಿಡ್-19 ತುರ್ತು ಸೇವಾ ತಂಡಕ್ಕೆ ತರಬೇತಿ ಶಿಬಿರ

Update: 2020-07-15 13:52 GMT

ಮಂಗಳೂರು, ಜು.15: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಎಸ್.ವೈ.ಎಸ್ ನ ಸಹಕಾರದೊಂದಿಗೆ ಕೋವಿಡ್-19ಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಕಾರ್ಯಾಗಾರವು ಇಂದು ಮಂಗಳೂರು, ಬಿ.ಸಿ.ರೋಡು, ಉಪ್ಪಿನಂಗಡಿ ಮತ್ತು ಪುತ್ತೂರಿನ ಒಟ್ಟು ಕೇಂದ್ರಗಳಲ್ಲಿ ನಡೆಯಿತು.

ಸುಳ್ಯ, ಪುತ್ತೂರು, ವಿಟ್ಲ  ವ್ಯಾಪ್ತಿಯ ತಂಡಕ್ಕೆ ಪುತ್ತೂರು ತಾಲೂಕಿನ ಈಶ್ವರಮಂಗಲ ತ್ವೈಬಾ ಸೆಂಟರ್ ನಲ್ಲಿ, ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ವ್ಯಾಪ್ತಿಯ ತಂಡಕ್ಕೆ ಉಪ್ಪಿನಂಗಡಿ ಸುನ್ನೀ ಸೆಂಟರ್ ನಲ್ಲಿ, ಮುಡಿಪು, ಬಂಟ್ವಾಳ, ಮೂಡಬಿದ್ರೆ ವ್ಯಾಪ್ತಿಯ ತಂಡಕ್ಕೆ ಬಿ.ಸಿ.ರೋಡಿನಲ್ಲಿ ಹಾಗೂ ಉಳ್ಳಾಲ, ಮಂಗಳೂರು, ಸುರತ್ಕಲ್ ವ್ಯಾಪ್ತಿಯ ತಂಡಕ್ಕೆ ಮಂಗಳೂರಿನ ಪಡೀಲ್ ನಲ್ಲಿರುವ ಇಲ್ಮ್ ಸೆಂಟರ್ ನಲ್ಲಿ ಕಾರ್ಯಾಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ಆರೋಗ್ಯ ವೈದ್ಯಾಧಿಕಾರಿ ಡಾ.ನವೀನ್, ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿ ಡಾ.ಜಯಪ್ರಕಾಶ್, ಎಸ್ಸೆಸ್ಸೆಫ್ ರಾಜ್ಯ ಸುಪ್ರೀಂ ಕೌನ್ಸಿಲ್ ನಾಯಕ ಜಿ.ಎಂ.ಎಂ ಕಾಮಿಲ್ ಸಖಾಫಿ, ಮುಹಿಮ್ಮಾತ್ ಮುದರ್ರಿಸ್ ಅಬ್ದುಲ್ ಅಝೀಝ್ ಮಿಸ್ಬಾಹಿ, ಜಿಲ್ಲಾ ಕಾರ್ಯದರ್ಶಿ ರಶೀದ್ ಹಾಜಿ ವಗ್ಗ, ಜಿಲ್ಲಾ ನಾಯಕರಾದ ನವಾಝ್ ಸಖಾಫಿ ಅಡ್ಯಾರ್, ಎ.ಎಂ.ಫೈಝಲ್ ಝುಹ್'ರಿ ಕಲ್ಲುಗುಂಡಿ, ಇಲ್ಯಾಸ್ ಪೊಟ್ಟೊಳಿಕೆ ಮುಂತಾದವರು ತರಬೇತಿ ನಡೆಸಿಕೊಟ್ಟರು.

ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ, ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ, ಕೋಶಾಧಿಕಾರಿ ಅಲಿ ತುರ್ಕಳಿಕೆ, ಜಿಲ್ಲಾ ನಾಯಕರಾದ ಖುಬೈಬ್ ತಂಙಳ್, ಹಕೀಂ ಕಳೆಂಜಿಬೈಲು, ಯು.ಪಿ.ಮುಸ್ತಪಾ ಹಾಗೂ ನಾಲ್ಕು ಸೆಂಟರ್ ಗಳಲ್ಲಿ ಆಯ್ದ ಸೇವಾ ತಂಡದ ಸೇವಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News