ಸಿಬಿಎಸ್‍ಇ ಪರೀಕ್ಷೆ: ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಶಾಲೆಗೆ ಶೇ.100 ಫಲಿತಾಂಶ

Update: 2020-07-15 14:07 GMT
ಖದೀಜಾ ದಿಯಾನ, ನಫೀಸತ್ ಸುಹಾನ, ನುಹಾ ಮರಿಯಮ್

ಮಂಗಳೂರು,ಜು.15: ಮಂಗಳೂರಿನ ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಶಾಲೆಯು ಈ ಬಾರಿಯೂ ಸಿಬಿಎಸ್‍ಇ ಹತ್ತನೇ ತರಗತಿಯ ಪರೀಕ್ಷೇಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ್ದು, ಸತತ 6ನೇ ಬಾರಿ ಶೇ.100% ಫಲಿತಾಂಶ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.

2019-20 ನೇ ಸಾಲಿನ ಪರೀಕ್ಷೆಗೆ ಒಟ್ಟು 93 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ ಖದೀಜಾ ದಿಯಾನ 92.2%(461) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ . ನಫೀಸತ್ ಸುಹಾನ 89.8%(449) ಮತ್ತು ನುಹಾ ಮರಿಯಮ್ 88.6%(443) ಅಂಕ ಪಡೆದು ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.

32 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 40 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 21 ವಿದ್ಯಾರ್ಥಿಗಳು ದ್ವಿತೀಯ    ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದದವರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News