ಸಿಬಿಎಸ್ಇ: ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಗೆ ಸತತ 6ನೇ ಬಾರಿ ಶೇ.100 ಫಲಿತಾಂಶ

Update: 2020-07-15 16:02 GMT

ಮೂಡುಬಿದಿರೆ, ಜು.15: ಪ್ರಸಕ್ತ ಸಾಲಿನ ಸಿಬಿಎಸ್ಇ ವಾರ್ಷಿಕ ಪರೀಕ್ಷೆಯಲ್ಲಿ ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆ ಸತತ 6ನೇ ಬಾರಿ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಬರೆದ 47 ವಿದ್ಯಾರ್ಥಿಗಳ ಪೈಕಿ 13 ಮಂದಿ ವಿಶಿಷ್ಟ ಶ್ರೇಣಿಯಲ್ಲಿ 24 ಪ್ರಥಮ ದರ್ಜೆಯಲ್ಲಿ ಹಾಗೂ 10 ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಶಾಲೆಯಲ್ಲೇ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ತಹ್ ಸೀನ 90% ಶೇ. ದಾಖಲಿಸಿದ್ದಾರೆ.

ವಿದ್ಯಾರ್ಥಿಗಳಾದ ಮುಹಮ್ಮದ್ ಶಾಹಿಲ್, ಶೇಕ್ ಸಿಯಾಫ್ ಸಲೀಂ, ಮದೀಹ, ಸಾರ ಜುಬೇರ್, ಆಯಿಷ ಹಸ್ ನಾನ್, ನದಾ ಝೈನಭ, ಅವ್ವಮ್ಮ ಶಮ್ನ, ಆಯಿಷಾ ಮಹಾ,  ಫಾತಿಮಾ ಸುಹಾ, ಫಾತಿಮಾ ಅಬ್ದುಲ್ ಲತೀಫ್, ಜುವೇರಿಯ ಇಸ್ಮಾಯಿಲ್ ಬಾನು, ಮರಿಯಮ್ ಲಿಭಾ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರ್ ಮ್ಯಾನ್ ಯು.ಎಂ ಮೊಯಿದಿನ್ ಕುಂಞಿ, ನಿರ್ದೇಶಕಿ ಮುಮ್ತಾಝ್ ಬಿಂತ್ ಮೊಯಿದಿನ್ ಕುಂಞಿ, ಪ್ರಾಂಶುಪಾಲೆ ಶ್ರೀಮತಿ ನಝ್ರಾನ, ಉಪ ಪ್ರಾಂಶುಪಾಲ ಅಲ್ತಾಫ್, ಆಡಳಿತಾಧಿಕಾರಿ ಮುಹಮ್ಮದ್ ಶಹಾಂ, ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News