ವೇತನ ನೀಡದೆ 5 ವರ್ಷಗಳವರೆಗೆ ಸಿಬ್ಬಂದಿಯನ್ನು ರಜೆಯಲ್ಲಿ ಕಳುಹಿಸಲಿದೆ ಏರ್ ಇಂಡಿಯಾ!

Update: 2020-07-15 16:29 GMT

ಹೊಸದಿಲ್ಲಿ, ಜು. 15: ಉದ್ಯೋಗಿಗಳ ಸಂಖ್ಯೆಯನ್ನು ಕಡಿತಗೊಳಿಸುವ ಕ್ರಮವಾಗಿ ಏರ್ ಇಂಡಿಯಾ ಮಂಡಳಿ ಸಮರ್ಪಕ ಕರ್ತವ್ಯ ನಿರ್ವಹಿಸದ ಸಿಬ್ಬಂದಿಯನ್ನು 5 ವರ್ಷಗಳವರೆಗೆ ವೇತನ ನೀಡದೆ ಕಡ್ಡಾಯ ರಜೆಯ ಮೇಲೆ ಕಳುಹಿಸುವಂತೆ ಶಿಫಾರಸು ಮಾಡಲು ಏರ್ ಲೈನ್ಸ್ ನ ಅಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರಿಗೆ ಅವಕಾಶ ನೀಡಿದೆ.

ಬನ್ಸಾಲ್ ಉದ್ಯೋಗಿಗಳನ್ನು ವೇತನ ನೀಡದೆ 6 ತಿಂಗಳು ಅಥವಾ 2 ವರ್ಷಗಳಿಂದ 5 ವರ್ಷಕ್ಕೆ ವಿಸ್ತರಿಸಬಹುದಾದ ಅವಧಿಗೆ ರಜೆಯಲ್ಲಿ ಕಳುಹಿಸಬಹುದು ಎಂದು ಏರ್ ಇಂಡಿಯಾ ಮುಖ್ಯ ಆಡಳಿತ ನಿರ್ದೇಶಕ ರಾಜೀವ್ ರ ಅಧಿಕೃತ ಆದೇಶ ತಿಳಿಸಿದೆ.

ಕೇಂದ್ರ ಕಚೇರಿಯಲ್ಲಿರುವ ಇಲಾಖೆ ಮುಖ್ಯಸ್ಥರು ಹಾಗೂ ಪ್ರಾದೇಶಿಕ ನಿರ್ದೇಶಕರು ಪ್ರತಿಯೊಬ್ಬ ಉದ್ಯೋಗಿಯ ಕರ್ತವ್ಯ ನಿರ್ವಹಣೆಯನ್ನು ಪರಿಶೀಲಿಸಬೇಕು ಹಾಗೂ ವೇತನ ರಹಿತ ರಜೆಯನ್ನು ಆಯ್ಕೆ ಮಾಡುವ ಉದ್ಯೋಗಿಗಳನ್ನು ಗುರುತಿಸಬೇಕು ಎಂದು ಆದೇಶ ಹೇಳಿದೆ.

ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಅನುಮತಿ ಪಡೆಯಲು ಇಂತಹ ಉದ್ಯೋಗಿಗಳ ಹೆಸರನ್ನು ಕೇಂದ್ರ ಕಚೇರಿಯಲ್ಲಿರುವ ಜನರಲ್ ಮ್ಯಾನೇಜರ್ (ಪರ್ಸನಲ್) ಗೆ ಕಳುಹಿಸಬೇಕು ಎಂದು ಆದೇಶ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News