ಅಕ್ರಮ ದನದ ಮಾಂಸ ಮಾರಾಟ: ಓರ್ವನ ಸೆರೆ
Update: 2020-07-15 22:57 IST
ಬ್ರಹ್ಮಾವರ, ಜು.15: ಅಕ್ರಮವಾಗಿ ದನದ ಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವನನ್ನು ಬ್ರಹ್ಮಾವರ ಪೊಲೀಸರು ಚೇರ್ಕಾಡಿ ಗ್ರಾಮದ ಗುಂಡಾರಿಕಲ್ಲು ನೂಜಿನಬೈಲು ಕ್ರಾಸ್ ಎಂಬಲ್ಲಿ ಜು.14ರಂದು ಸಂಜೆ ವೇಳೆ ಬಂಧಿಸಿದ್ದಾರೆ.
ಚೇರ್ಕಾಡಿ ಗ್ರಾಮದ ಪೇತ್ರಿಯ ಗುಂಡಾರಿಕಲ್ಲು ನಿವಾಸಿ ಸತೀಶ(45) ಬಂಧಿತ ಆರೋಪಿ. ಬಂಧಿತನಿಂದ 15 ಕೆ.ಜೆ. ದನದ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.