ಸಿಬಿಎಸ್‌ಇ 10ನೆ ತರಗತಿ ಫಲಿತಾಂಶ: ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಗೆ ಶೇ.100 ಫಲಿತಾಂಶ

Update: 2020-07-15 17:31 GMT

ಮಂಗಳೂರು, ಜು.15: ಮಾರ್ಚ್‌ನಲ್ಲಿ ನಡೆದ ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ಮೇರಿಹಿಲ್‌ನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಗೆ ಶೇ.100 ಫಲಿತಾಂಶ ದಾಖಲಿಸಿದೆ.

ಶಾಲೆಯ 110 ವಿದ್ಯಾರ್ಥಿಗಳಲ್ಲಿ 69 ಮಂದಿ ಉನ್ನತ ಶ್ರೇಣಿ ಹಾಗೂ 31 ಮಂದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಪ್ರಿಯಾ ಅಶೋಕ ಪಾಟೀಲ್ (488/500, ಗಣಿತ-100)ಶೇ. 97.6 ಅಂಕಗಳೊಂದಿಗೆ ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

ಭೂಮಿಕಾ ಅರುಣ್ (480/500, ಸಮಾಜ ವಿಜ್ಞಾನ -100) ಮತ್ತು ಲಿಯೊರಾ ಸ್ಟಾನಾ ಡಿಸೋಜ (480/500, ಸಮಾಜ ವಿಜ್ಞಾನ-99) ಶೇ.96 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಹರ್ಷ ಜಿ.ಪಿ. ಭಟ್ ಶೇ.95 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ರಿತ್ ಪೂಂಜಾ (474/500, ಸಮಾಜ ವಿಜ್ಞಾನ - 100) ಶೇ. 94.8 ಅಂಕಗಳೊಂದಿಗೆ ಚರ್ತುಥ ಸ್ಥಾನವನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News