ಮೊಡೆರ್ನಾದ ಕೋವಿಡ್-19 ಲಸಿಕೆ ಜು.27ರೊಳಗೆ ಪರೀಕ್ಷೆ

Update: 2020-07-15 17:34 GMT

 ವಾಶಿಂಗ್ಟನ್, ಜು.15: ತಾನು ಸಂಶೋಧಿಸಿರುವ ಕೋವಿಡ್-19 ಲಸಿಕೆಯು ಜುಲೈ 27ರೊಳಗೆ ಮಾನವರ ಮೇಲೆ ಪ್ರಯೋಗಿಸುವ ಅಂತಿಮ ಹಂತವನ್ನು ಪ್ರವೇಶಿಸಲಿದೆಯೆಂದು ಅಮೆರಿಕದ ಬಯೋಟೆಕ್ ಸಂಸ್ಥೆ ಮೊಡೆರ್ನಾ ಮಂಗಳವಾರ ಘೋಷಿಸಿದೆ.

ಲಸಿಕೆಯ ಮೂರನೆ ಹಂತದ ಟ್ರಯಲ್ನಲ್ಲಿ ಅಮೆರಿಕದಾದ್ಯಂತ 30 ಸಾವಿರ ಮಂದಿ ಪಾಲ್ಗೊಳ್ಳಲಿದ್ದು, ಅವರಲ್ಲಿ ಅರ್ಧಾಂಶದಷ್ಟು ಮಂದಿ 100 ಮೈಕ್ರೋಗ್ರಾಂ ಡೋಸ್ ನ ಲಸಿಕೆಯನ್ನು ಪಡೆಯಲಿದ್ದಾರೆ ಉಳಿದ ಅರ್ಧಾಂಶದಷ್ಟು ಮಂದಿ ಮಾತ್ರೆ ರೂಪದಲ್ಲಿ ಔಷಧಿಯನ್ನು ಸ್ವೀಕರಿಸಲಿದ್ದಾರೆ ಎಂದು ಮೊಡೆರ್ನಾದ ಹೇಳಿಕೆ ತಿಳಿಸಿದೆ.

  ಈ ಲಸಿಕೆಯು ಸುರಕ್ಷಿತವಾದುದು ಹಾಗೂ ಸಾರ್ಸ್-ಕೋವಿಡ್2 ವೈರಸ್ ನಂತಹ ಸೋಂಕನ್ನು ತಡೆಗಟ್ಟಬಲ್ಲದು ಎಂಬುದನ್ನು ನಿರೂಪಿಸುವ ರೀತಿಯಲ್ಲಿ ಈ ಲಸಿಕೆಯನ್ನು ಸಿದ್ಧಪಡಿಸಲಾಗಿದೆ ಎಂದು ಮೊಡೆರ್ನಾ ತಿಳಿಸಿದೆ. ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಬಳಿಕವೂ ಅದರ ಮೇಲಿನ ಅಧ್ಯಯನವನ್ನು 2022ರ ಅಕ್ಟೋಬರ್ 27ರವರೆಗೂ ನಡೆಸಲಾಗುವುದು ಎಂದು ಕ್ಲಿನಿಕಲ್ ಟ್ರಯಲ್ಸ್.ಜಿಓವಿ ಆನ್ಲೈನ್ ಪತ್ರಿಕೆಯ ವರದಿಯು ತಿಳಿಸಿದೆ.

ಮೊಡೆರ್ನಾ ಔಷಧಿಯ ಮೊದಲ ಹಂತದ ಕ್ಲಿನಿಕಲ್ ಪರೀಕ್ಷೆಯಲ್ಲಿ ಪಾಲ್ಗೊಂಡ 45 ಮಂದಿ ರೋಗಿಗಳು ವೈರಸ್ ವಿರುದ್ಧ ಪ್ರತಿಕಾಯ (ಆ್ಯಂಟಿಬಾಡಿ)ಗಳನ್ನು ಬೆಳೆಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ ಎಂದು ನ್ಯೂಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಮಂಗಳವಾರ ವರದಿಯನ್ನು ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News