ಜು.16ರಿಂದ ಕ್ಯಾಂಪ್ಕೊ ಖರೀದಿ ವ್ಯವಹಾರಗಳು ಸ್ಥಗಿತ

Update: 2020-07-15 17:36 GMT

ಮಂಗಳೂರು, ಜು.15: ಕೋವಿಡ್-19 ಸಾಂಕ್ರಾಮಿಕ ರೋಗದ ವ್ಯಾಪಕ ಹರಡುವಿಕೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತವು ಜಿಲ್ಲಾದ್ಯಂತ ಜು.16ರಿಂದ 1 ವಾರಗಳ ಕಾಲ ಲಾಕ್‌ಡೌನ್ ಹೇರಿದೆ. ಹಾಗಾಗಿ ಪರಿಸ್ಥಿತಿಯ ತೀವ್ರತೆಯನ್ನರಿತು ಜಿಲ್ಲಾಡಳಿತದ ಆದೇಶದ ಅನುಸಾರವಾಗಿ ಕ್ಯಾಂಪ್ಕೊ ಸಂಸ್ಥೆಯು ಜು.16ರಿಂದ 1 ವಾರದ ಕಾಲ ತನ್ನ ಮಂಗಳೂರಿನಲ್ಲಿರುವ ಕೇಂದ್ರ ಕಚೇರಿ ಮತ್ತು ಜಿಲ್ಲೆಯಾದ್ಯಂತವಿರುವ ಶಾಖೆಗಳಲ್ಲಿನ ವ್ಯವಹಾರಗಳನ್ನು ಸ್ಥಗಿತಗೊಳಿಸಲಿದೆ.

ದ.ಕ. ಮತ್ತು ಬೆಂಗಳೂರಿನಲ್ಲಿರುವ ಶಾಖೆಗಳಲ್ಲಿನ ವ್ಯವಹಾರಗಳು ಜು.16ರಿಂದ 1 ವಾರದ ಕಾಲ, ಧಾರವಾಡ ಜಿಲ್ಲೆ (ಹುಬ್ಬಳ್ಳಿ ಶಾಖೆ - ಜು.15ರಿಂದ 24ರ ವರೆಗೆ) ಸ್ಥಗಿತಗೊಳ್ಳಲಿದೆ. ಉಳಿದಂತೆ ಕ್ಯಾಂಪ್ಕೊದ ಶಿವಮೊಗ್ಗ, ಶಿರಸಿ ವಲಯಗಳು, ಉಡುಪಿ ಜಿಲ್ಲೆ ಮತ್ತು ಕೇರಳದ ಎಲ್ಲ ಶಾಖೆಗಳು ಎಂದಿನಂತೆ ತೆರೆದು ಕಾರ್ಯಾಚರಿಸಲಿವೆ ಎಂದು ವ್ಯವಸ್ಥಾಪಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News