ಅಡ್ಡೂರು: ರೋಗನಿರೋಧಕ ಶಕ್ತಿ ವೃಧ್ಧಿಸುವ ಔಷಧಿ ವಿತರಣೆ

Update: 2020-07-15 18:11 GMT

ಮಂಗಳೂರು: ಅಡ್ಡೂರು ಸೆಂಟ್ರಲ್ ಕಮಿಟಿ ಹಾಗೂ ಆಯುಷ್ ಇಲಾಖೆ ಸಹಭಾಗಿತ್ವದಲ್ಲಿ ಇಂದು ಕೊರೋನ ವೈರಸ್ ನಿಯಂತ್ರಿಸುವ ಸಲುವಾಗಿ ಅಡ್ಡೂರು ಸೆಂಟ್ರಲ್ ಕಮಿಟಿ ಕಛೇರಿಯಲ್ಲಿ ರೋಗನಿರೋಧಕ ಶಕ್ತಿಯನ್ನು ವೃಧ್ಧಿಸುವ ಔಷಧಿಯನ್ನು ವಿತರಿಸಲಾಯಿತು.

ಆಯುರ್ವೇದ ಡಾಕ್ಟರ್ ಪುಶ್ಪಲತಾ ರವರು ಔಷಧಿ ಸೇವನಾ ವಿಧಾನ ಮತ್ತು ಕೊರೋನ ತಡೆಗಟ್ಟುವ ಕೆಲವು ಸಲಹೆಗಳನ್ನು ನೀಡಿದರು.

ನಂತರ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ. ಇಬ್ರಾಹಿಮ್, ಗ್ರಾಮೀಣ ಭಾಗದಲ್ಲಿ ಇಂತಹ ಉತ್ತಮ ಕಾರ್ಯಕ್ರಮವನ್ನು ನಡೆಸುತ್ತಿರುವ ಅಡ್ಡೂರು ಸೆಂಟ್ರಲ್ ಕಮಿಟಿಯ ಕಾರ್ಯವನ್ನು ಶ್ಲಾಘಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಡ್ಡೂರು ಸೆಂಟ್ರಲ್ ಕಮಿಟಿ ಅಧ್ಯಕ್ಷ  ೆಂ. ಶರೀಫ್, ನಮ್ಮ ಪರಿಸರದಲ್ಲಿ ಕೊರೋನ ವೈರಸ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ಮನಗಂಡು ಆಯುಶ್ ಇಲಾಖೆಯ ವೈದ್ಯಾಧಿಕಾರಿಗಳೊಂದಿಗೆ  ಮಾತನಾಡಿ ನಮಗೆ ರೋಗನಿರೋಧಕ ಶಕ್ತಿ ವೃಧ್ಧಿಸುವ ಔಷಧಿಯನ್ನು ಒದಗಿಸಬೇಕೆಂದು ಮನವಿ ಮಾಡಿದಾಗ ಕೂಡಲೇ ಔಷಧಿಯನ್ನು ನೀಡಿ ಸ್ಪಂದಿಸಿದ್ದಾರೆ ಎಂದರು.

ಈ ಸಂಧರ್ಭ ಸಲಾಮ್ ಗೊಳಿಪಡ್ಪು , ಶರೀಫ್ ಗೊಳಿಪಡ್ಪು, ಅಶ್ರಫ್ ನಡುಗುಡ್ಡೆ, ಅಡ್ಡೂರು ಮೋನಾಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಇಬ್ರಾಹಿಂ ಅಲಕೆ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News