ಪ್ರವಾದಿ ಮುಹಮ್ಮದರ ಕುರಿತ ಚಿತ್ರ ಪ್ರಸಾರಕ್ಕೆ ತಡೆ ಕೋರಿ ಕೇಂದ್ರಕ್ಕೆ ಪತ್ರ ಬರೆದ ಮಹಾರಾಷ್ಟ್ರ ಗೃಹ ಸಚಿವ

Update: 2020-07-16 08:44 GMT

ಮುಂಬೈ: ನಗರದ ರಾಝಾ ಅಕಾಡಮಿ ದೂರು ನೀಡಿದ ಹಿನ್ನೆಲೆಯಲ್ಲಿ ‘ಮುಹಮ್ಮದ್: ದಿ ಮೆಸೆಂಜರ್ ಆಫ್ ಗಾಡ್' ಎಂಬ ಚಲನಚಿತ್ರವನ್ನು ಡಿಜಿಟಲ್ ಪ್ಲಾಟ್‍ ಫಾರ್ಮ್ ಗಳಲ್ಲಿ ಪ್ರಸಾರ ಮಾಡುವುದಕ್ಕೆ ನಿಷೇಧ ಹೇರಬೇಕೆಂದು ಕೋರಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವುದನ್ನು ತಪ್ಪಿಸಲು ಐಟಿ ಕಾಯಿದೆಯಂತೆ ಈ ಚಿತ್ರಕ್ಕೆ ನಿಷೇಧ ಹೇರಬೇಕೆಂದು ಅವರು ಆಗ್ರಹಿಸಿದ್ದಾರೆ.

ರಾಝಾ ಅಕಾಡೆಮಿ ಈ ಚಲನಚಿತ್ರ ಪ್ರಸಾರದ ವಿರುದ್ಧ  ರಾಜ್ಯ ಸೈಬರ್ ಘಟಕಕ್ಕೆ ದೂರು ನೀಡಿತ್ತು. ಆದರೆ ಈ ದೂರು ನಿಡಲು ಕಾರಣವೇನೆಂದು ಸ್ಪಷ್ಟ ಪಡಿಸಲಾಗಿಲ್ಲ.

ಜುಲೈ 21ರಂದು ಚಿತ್ರದ ಪ್ರಸಾರಕ್ಕೆ ದಿನ ನಿಗದಿಯಾಗಿತ್ತು. ಆದರೆ ಯುಟ್ಯೂಬ್, ಫೇಸ್ ಬುಕ್, ಟ್ವಿಟ್ಟರ್, ಇನ್‍ ಸ್ಟಾಗ್ರಾಂ ಮತ್ತು ವಾಟ್ಸ್ಯಾಪ್‍ ಗಳಲ್ಲಿ ಈ ಚಿತ್ರ ಪ್ರಸಾರ ನಿಷೇಧಿಸಬೇಕೆಂದು ಈಗ ಆಗ್ರಹಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News