ಮಹಾರಾಷ್ಟ್ರದ ಪ್ರಪ್ರಥಮ ಮಹಿಳಾ ಚುನಾವಣಾ ಆಯುಕ್ತೆ ನೀಲಾ ಸತ್ಯನಾರಾಯಣ್ ಕೊರೋನದಿಂದ ಮೃತ್ಯು

Update: 2020-07-16 09:46 GMT

ಹೊಸದಿಲ್ಲಿ: ಮಾಜಿ ಐಎಎಸ್ ಅಧಿಕಾರಿ, ಮಹಾರಾಷ್ಟ್ರದ ಮೊದಲ ಮಹಿಳಾ ಚುನಾವಣಾ ಆಯುಕ್ತೆ ನೀಲಾ ಸತ್ಯನಾರಾಯಣ್ ಕೊರೋನ ವೈರಸ್ ಸೋಂಕಿನಿಂದ ಮುಂಬೈಯಲ್ಲಿ ಮೃತಪಟ್ಟಿದ್ದಾರೆ.

ಕೊರೋನ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮುಂಬೈಯ ಸೆವೆನ್ ಹಿಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

2009ರಲ್ಲಿ ಅವರು ಮಹಾರಾಷ್ಟ್ರದ ಪ್ರಪ್ರಥಮ ಮಹಿಳಾ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದರು. 2014ರ ಜುಲೈ 5ರಂದು ಅವರು ನಿವೃತ್ತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News