ಖೇಲೋ ಇಂಡಿಯಾ ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವನೆ
ಉಡುಪಿ, ಜು.16: ಭಾರತ ಸರಕಾರ ಖೇಲೋ ಇಂಡಿಯಾ ಯೋಜನೆಯಡಿ ತಳಮಟ್ಟದಲ್ಲಿ ಪರಿಣಾಮಕಾರಿಯಾದ ಕ್ರೀಡಾ ತರಬೇತಿ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ದೇಶದಲ್ಲಿ ಒಟ್ಟು 1000 ಖೇಲೋ ಇಂಡಿಯಾ ಕೇಂ್ರಗಳನ್ನು ಸ್ಥಾಪಿಸಲು ಉದ್ದೇಶಿಸಿದೆ.
ಈ ಬಗ್ಗೆ ಉಡುಪಿ ಜಿಲ್ಲೆಯ ಅರ್ಹ ಸಾಧನೆ ಮಾಡಿದ ಕ್ರೀಡಾಪಟುಗಳು/ಕಳೆದ ಐದು ವರ್ಷಗಳಿಂದ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿರುವ ಕ್ರೀಡಾ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
ಇದಕ್ಕಾಗಿ ಹದಿನಾಲ್ಕು ಕ್ರೀಡಾ ವಿಭಾಗಗಳನ್ನು ಗುರುತಿಸಲಾಗಿದೆ. ಈ ಖೇಲೋ ಇಂಡಿಯಾ ಕೇಂದ್ರಗಳಿಗೆ ಕೇಂದ್ರ ಸರಕಾರದಿಂದ ತರಬೇತುದಾರರ ಗೌರವಧನ, ಸಹಾಯಕ ಸಿಬ್ಬಂದಿ, ಕ್ರೀಡಾ ಉಪಕರಣಗಳು, ಕ್ರೀಡಾಕಿಟ್, ಕ್ರೀಡಾಕೂಟಗಳಲ್ಲಿ ಭಾಗವಹಿಸಲು ತಗಲುವ ವೆಚ್ಚ ಭರಿಸಲು ವಾರ್ಷಿಕ ಗರಿಷ್ಠ 5 ಲಕ್ಷರೂ. ಅನುದಾನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಡಾ.ರೋಶನ್ ಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಜಿಲ್ಲೆ (0820-2521324,94808-86467) ಇವರನ್ನು ಸಂಪರ್ಕಿಸಲು ಕೋರಿದೆ.