ಮಲಾರ್ ಹೆಲ್ಪ್‌ಲೈನ್‌ನಿಂದ ಶ್ರಮದಾನ
Update: 2020-07-16 18:04 IST
ಕೊಣಾಜೆ, ಜು.16: ಮಲಾರ್ ಹೆಲ್ಪ್ಲೈನ್ ಎಕ್ಸಿಕ್ಯೂಟಿವ್ ಕಮಿಟಿಯು ರಚಿಸಿದ ತುರ್ತು ಪರಿಹಾರ ತಂಡದ ವತಿಯಿಂದ ಇತ್ತೀಚೆಗೆ ಪಾವೂರು ಗ್ರಾಪಂ ಬಳಿಯಿಂದ ಮಲಾರ್ ಟಿಪ್ಪುನಗರ, ಕೆಳಗಿನ ಮಾರ್ಗ, ಅರಸ್ತಾನ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಬದಿಯ ಮರಗಿಡಗಳನ್ನು ಕಡಿದು ಶುಚಿತ್ವ ಕಾರ್ಯ ಹಮ್ಮಿಕೊಳ್ಳಲಾಯಿತು.
ತುರ್ತು ಪರಿಹಾರ ತಂಡದ ಉಸ್ತುವಾರಿ ಕಬೀರ್ ಮಲಾರ್ ಮತ್ತು ಮಲಾರ್ ಹೆಲ್ಪ್ಲೈನ್ ಅಧ್ಯಕ್ಷ ಶಮೀರ್ ಟಿಪ್ಪುನಗರ ಅವರ ನೇತೃತ್ವದಲ್ಲಿ ನಡೆದ ಶ್ರಮದಾನದಲ್ಲಿ ಪಾವೂರು ಗ್ರಾಪಂ ಮಾಜಿ ಸದಸ್ಯರಾದ ಎಂಪಿ ಹಸನ್,ಟಿ.ನಾಸಿರ್, ತುರ್ತು ಪರಿಹಾರ ತಂಡದ ಸಹ ಸಂಚಾಲಕ ರಿಝ್ವಾನ್, ಎಂಪಿ ಆಶಿರ್ ಹಾಗೂ ಮಲಾರ್ ಹೆಲ್ಪ್ಲೈನ್‌ನ ಸದಸ್ಯರು ಭಾಗವಹಿಸಿದ್ದರು.