ಬ್ರಹ್ಮಾವರದಲ್ಲಿ 9 ತಿಂಗಳ ಮಗುವಿಗೆ ಕೊರೋನ ಪಾಸಿಟಿವ್

Update: 2020-07-16 13:35 GMT
ಸಾಂದರ್ಭಿಕ ಚಿತ್ರ

ಉಡುಪಿ, ಜು.16: 9 ತಿಂಗಳ ಹಸುಗೂಸು ಸೇರಿದಂತೆ ಬ್ರಹ್ಮಾವರ ತಾಲೂಕಿನಲ್ಲಿ ಇಂದು ಒಟ್ಟು ಮೂರು ಪಾಸಿಟಿವ್ ಕೇಸುಗಳು ದಾಖಲಾಗಿವೆ ಎಂದು ಬ್ರಹ್ಮಾವರದ ತಹಶೀಲ್ದಾರ್ ಕಿರಣ್ ಗೋರಯ್ಯ ತಿಳಿಸಿದ್ದಾರೆ.

ಬ್ರಹ್ಮಾವರದ ಚಾಂತಾರು ಗ್ರಾಮದಲ್ಲಿ 9 ತಿಂಗಳ ಮಗುವಿನಲ್ಲಿ ಪಾಸಿಟಿವ್ ಕಂಡುಬಂದಿದೆ. ಹೀಗಾಗಿ ಈ ಕುಟುಂಬ ವಾಸಿಸುವ ವಸತಿ ಸಂಕೀರ್ಣದ ಐದನೇ ಮಹಡಿಯ ಎಲ್ಲಾ ಎಂಟು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದವರು ಹೇಳಿದರು.

ಇನ್ನೊಂದು ಪ್ರಕರಣ ವರದಿಯಾಗಿರುವುದು ಹಾವಂಜೆ ಗ್ರಾಮದಿಂದ. ಉಡುಪಿಯ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿರುವ 37 ಹರೆಯದ ಮಹಿಳೆಯಲ್ಲಿ ಪಾಸಿಟಿವ್ ಕಂಡುಬಂದಿದೆ. ಇಲ್ಲಿ ಮೂರು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಸಂಜೆಯ ವೇಳೆಗೆ ಹಂದಾಡಿಯ 45 ವರ್ಷ ಪ್ರಾಯದ ಅಡುಗೆ ಕೆಲಸ ಮಾಡುವವರಲ್ಲಿ ಪಾಸಿಟಿವ್ ಕಂಡುಬಂದಿದ್ದು, ಅವರನ್ನು ಸಹ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಮನೆಯ ಅಕ್ಕಪಕ್ಕದ ಎಂಟು ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದೂ ಗೋರಯ್ಯ ತಿಳಿಸಿದರು.

ಕುಂದಾಪುರ ತಾಲೂಕಿನಲ್ಲಿ ಇಂದು ಒಟ್ಟು ಎಂಟು ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಸಿದ್ಧಾಪುರದ ಮೂವರು, ಗಂಗೊಳ್ಳಿಯ ಇಬ್ಬರು, ಸೇನಾಪುರದ ಒಬ್ಬರು, ತ್ರಾಸಿಯ ಒಬ್ಬರು ಹಾಗೂ ಹೊಸಾಡಿನ ಒಬ್ಬರಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ ಎಂದು ತಹಶೀಲ್ದಾರ್ ಆನಂದಪ್ಪ ತಿಳಿಸಿದ್ದಾರೆ. ಈ ಎಲ್ಲಾ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಬೈಂದೂರು ತಾಲೂಕಿನಲ್ಲಿ ಎಎಸ್ಸೈ ಸೇರಿದಂತೆ ಮೂವರು ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ.

ಉಡುಪಿಯಲ್ಲಿ 14: ಉಡುಪಿ ತಾಲೂಕಿನಲ್ಲಿ ಇಂದು ಒಟ್ಟು 14 ಮಂದಿಯಲ್ಲಿ ಸೋಂಕಿನ ಪಾಸಿಟಿವ್ ಕಂಡುಬಂದಿದೆ. ಮಣಿಪಾಲದ ಐವರು, 76-ಬಡಗುಬೆಟ್ಟು ಹಾಗೂ ತೆಂಕನಿಡಿಯೂರಿನ ತಲಾ ಇಬ್ಬರು, ಮೂಡನಿಡಂಬೂರು, ಉದ್ಯಾವರ, ಆತ್ರಾಡಿ, ಹಿರೇಬೆಟ್ಟು ಹಾಗೂ ಹೆರ್ಗಗಳ ತಲಾ ಒಬ್ಬರಲ್ಲಿ ಪಾಸಿಟಿವ್ ಕಂಡುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News