ಪುತ್ತೂರು: ಕೊರೋನ ಸೋಂಕು ದೃಢಪಟ್ಟಿದ್ದ ಬಡ ಮಹಿಳೆಯ ಕುಟುಂಬಕ್ಕೆ ಅಗತ್ಯ ಸಾಮಾಗ್ರಿ ವಿತರಣೆ

Update: 2020-07-16 13:36 GMT

ಪುತ್ತೂರು: ಕೊರೋನ ಸೋಂಕು ದೃಢಪಟ್ಟಿದ್ದ ಮಹಿಳೆಯ ಮನೆಗೆ ಕಡಬದ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಹಾಜಿ ಮಹಮ್ಮದ್ ರಫೀಕ್ ಎಂಬವರು ತಿಂಗಳಿಗಾಗುವಷ್ಟು ಅಗತ್ಯ ದಿನಸಿಯನ್ನು ನೀಡಿ, ಕುಟುಂಬಕ್ಕೆ ಆತ್ಮಸ್ಥೆರ್ಯವನ್ನು ತುಂಬಿದ್ದಾರೆ.

ಶಾಂತಿಗೋಡು ನಿವಾಸಿಯೊರ್ವರಿಗೆ ಜು.1 ರಂದು ಸೋಂಕು ದೃಢಪಟ್ಟಿತ್ತು. ಇವರು ತಾಲೂಕು ಸರಕಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಅಡುಗೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಂಕಿತ ಬಡ ಮಹಿಳೆಯ ಪುತ್ರಿ ಖಾಸಗಿ ಸುದ್ದಿ ವಾಹಿನಿಯ ಕಾರ್ಯಕ್ರಮಕ್ಕೆ ಕರೆ ಮಾಡಿ, ತನ್ನ ತಾಯಿಗೆ ಕರ್ತವ್ಯದಲ್ಲಿದ್ದಾಗ ಕೊರೋನ ಸೋಂಕು ತಗುಲಿ ಚಿಕಿತ್ಸೆ ಪಡೆದು ಹೋಂ ಕ್ವಾರೆಂಟೈನ್‌ನಲ್ಲಿದ್ದರು. ಎರಡು ತಿಂಗಳಿಂದ ವೇತನ ಸಿಕ್ಕಿಲ್ಲ. ತಂದೆಗೂ ಉದ್ಯೋಗವಿಲ್ಲದೇ ಜೀವನದ ನಿರ್ವಹಣೆಗೆ ಸಂಕಷ್ಟ ಎದುರಿಸಬೇಕಾಗಿದೆ. ಅಲ್ಲದೇ ಕೊರೋನ ಭೀತಿಯಿಂದಾಗಿ ಸ್ಥಳೀಯರು ಹತ್ತಿರ ಬರುತ್ತಿಲ್ಲ ಎಂದು ಆಳಲನ್ನು ತೊಡಗಿಸಿಕೊಂಡಿದ್ದರು. 

ಇದನ್ನು ಅರಿತ ಕಡಬದ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಹಾಜಿ ಮಹಮ್ಮದ್ ರಫೀಕ್ ಕೊಡಾಜೆಯವರು ಅಗತ್ಯ ದಿನಸಿ ಸಾಮಾಗ್ರಿ ಪೂರೈಸಿ, ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಅಲ್ಲದೇ, ಮಹಿಳೆಗೆ ಅಡುಗೆ ಗುತ್ತಿಗೆದಾರರು ಒಂದು ತಿಂಗಳ ವೇತನ ನೀಡಿದ್ದು, ಬಾಕಿ ಹಣವನನ್ನು ಶೀಘ್ರವೇ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News