ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 18 ಮಂದಿಗೆ ಕೊರೋನ ಪಾಸಿಟಿವ್

Update: 2020-07-16 14:15 GMT

ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 18 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇವರಲ್ಲಿ 11 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗಲಿದೆ. ನಾಲ್ಕು ಮಂದಿ ವಿದೇಶಗಳಿಂದ, ಮೂವರು ಇತರ ರಾಜ್ಯಗಳಿಂದ ಆಗಮಿಸಿದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿ ದ್ದಾರೆ .

ಸಂಪರ್ಕದಿಂದ ಸೋಂಕು: ಮಂಗಲ್ಪಾಡಿ ಪಂಚಾಯತ್ ನ 30 ವರ್ಷದ ಮಹಿಳೆ, 46, 30, 36 ವರ್ಷದ ಪುರುಷರು, 14, 3 ವರ್ಷ ಮತ್ತು 40 ದಿನಗಳ ವಯೋಮಾನದ ಮಕ್ಕಳು, ಮಧೂರು ಪಂಚಾಯತ್ ನ 21 ವರ್ಷದ ಪುರುಷ, ಚೆಮ್ನಾಡ್ ಪಂಚಾಯತ್ ನ 46 ವರ್ಷದ ಮಹಿಳೆ, ಪನತ್ತಡಿ ಪಂಚಾಯತ್ ನ 65 ವರ್ಷದ ಪುರುಷನಿಗೆ ಸಂಪರ್ಕದಿಂದ ಸೋಂಕು ಖಚಿತಗೊಂಡವರು.

ಇತರ ರಾಜ್ಯಗಳಿಂದ ಬಂದವರು: ಮಂಗಳೂರಿನಿಂದ ಆಗಮಿಸಿದ್ದ ಕುಂಬಳೆ ಪಂಚಾಯತ್ ನ 26,55 ವರ್ಷದ ಪುರುಷರು, ಬೆಂಗಳೂರಿನಿಂದ ಬಂದಿದ್ದ ಕಳ್ಳಾರ್ ಪಂಚಾಯತ್ ನ 27 ವರ್ಷದ ಪುರುಷ ಸೋಂಕು ತಗುಲಿದವರು.

ವಿದೇಶಗಳಿಂದ ಆಗಮಿಸಿದವರು: ಶಾರ್ಜಾದಿಂದ ಬಂದಿದ್ದ ಚೆಂಗಳ ಪಂಚಾಯತ್ ನ 30 ವರ್ಷದ ಮಹಿಳೆ, ಅಜ್ ಮಾನ್ ನಿಂದ ಆಗಮಿಸಿದ್ದ ಪಳ್ಳಿಕ್ಕರೆ ಪಂಚಾಯತ್ ನ 20 ವರ್ಷದ ಪುರುಷ, ದುಬೈಯಿಂದ ಬಂದಿದ್ದ ಅಜಾನೂರು ಪಂಚಾಯತ್ ನ 27 ವರ್ಷದ ಪುರುಷ, ಕುವೈತ್ ನಿಂದ ಆಗಮಿಸಿದ್ದ ಮಂಗಲ್ಪಾಡಿ ಪಂಚಾಯತ್ ನ 32 ವರ್ಷದ ಪುರುಷನಿಗೆ ಕೋವಿಡ್ ದೃಢಪಟ್ಟಿದೆ.      

23 ಮಂದಿ ಗುಣಮುಖ: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 23 ಮಂದಿ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.

ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬದಿಯಡ್ಕ ಪಂಚಾಯತ್ ನ 40 ವರ್ಷದ ಪುರುಷ, ಮಂಗಲ್ಪಾಡಿ ಪಂಚಾಯತ್ ನ 40 ವರ್ಷದ ಪುರುಷ, ಮಧೂರು ಪಂಚಾಯತ್ ನ 40 ವರ್ಷದ ಪುರುಷ, ಮೀಂಜ ಪಂಚಾಯತ್ ನ 26 ವರ್ಷದ ಪುರುಷ, ಕುಂಬಳೆ ಪಂಚಾಯತ್ ನ 34,33,24 ವರ್ಷದ ಪುರುಷರು, ಪಳ್ಳಿಕ್ಕರೆ ಪಂಚಾಯತ್ ನ 64 ವರ್ಷದ ಪುರುಷ, ಮಂಗಲ್ಪಾಡಿ ಪಂಚಾಯತ್ ಪಂಚಾಯತ್ ನ 23,43 ವರ್ಷದ ಪುರುಷರು, ಮಂಜೇಶ್ವರ ಪಂಚಾಯತ್ನ 27 ವರ್ಷದ ಪುರುಷ.

ಉದಯಗಿರಿ ಸಿ.ಎಫ್.ಎಲ್.ಟಿ.ಸಿ.ಯಲ್ಲಿ  ದಾಖಲಾಗಿದ್ದ ಪುಲ್ಲೂರು-ಪೆರಿಯ ಪಂಚಾಯತ್ ನ 27 ವರ್ಷದ ಪುರುಷ, ಮಂಜೇಶ್ವರ ಪಂಚಾಯತ್ ನ 47,21 ವರ್ಷದ ಪುರುಷರು, ವರ್ಕಾಡಿ ಪಂಚಾಯತ್ ನ 21 ವರ್ಷದ, ಪೈವಳಿಕೆ ಪಂಚಾಯತ್ ನ 26 ವರ್ಷದ ಮಹಿಳೆಯರು, ಮೊಗ್ರಾಲ್ ಪುತ್ತೂರು ಪಂಚಾಯತ್ ನ 47,34 ವರ್ಷದ ಪುರುಷರು, ಎಣ್ಮಕಜೆ ಪಂಚಾಯತ್ ನ 36 ವರ್ಷದ ಮಹಿಳೆ.

ಪಡನ್ನಕ್ಕಾಡ್ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ ಮಂಗಲ್ಪಾಡಿ ಪಂಚಾಯತ್ ನ 27 ವರ್ಷದ ಪುರುಷ, ಮಧೂರು ಪಂಚಾಯತ್ ನ 50 ವರ್ಷದ, ದೇಲಂಪಾಡಿ ಪಂಚಾಯತ್ ನ 28 ವರ್ಷದ, ಪನತ್ತಡಿ ಪಂಚಾಯತ್ ನ 30 ವರ್ಷದ ಪುರುಷರು ಸೋಂಕಿನಿಂದ ಮುಕ್ತರಾದವರು.
       
ಜಿಲ್ಲೆಯಲ್ಲಿ ಕೋವಿಡ್ 6246 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ ಮನೆಗಳಲ್ಲಿ 5432 ಮಂದಿ, ಸಾಂಸ್ಥಿಕವಾಗಿ 814 ಮಂದಿ ನಿಗಾದಲ್ಲಿದ್ದಾರೆ. 441 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 523 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 1568 ಮಂದಿಯ ಫಲಿತಾಂಶ ಲಭಿಸಿಲ್ಲ. 

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News