ಧಾರಾಕಾರ ಮಳೆ: ಮಿತ್ತಕೋಡಿಯಲ್ಲಿ ಕುಸಿದ ಗುಡ್ಡ ಪ್ರದೇಶ

Update: 2020-07-16 16:20 GMT

ಕೊಣಾಜೆ: ದ.ಕ.ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮುಡಿಪು ಸಮೀಪದ ಮಿತ್ತಕೋಡಿ ಬಳಿ ಗುಡ್ಡ ಕುಸಿದು ಬಿದ್ದ ಘಟನೆ ಗುರುವಾರ ಸಂಜೆ ಸಂಭವಿಸಿದೆ.

ಮುಡಿಪು ಭಾಗದಲ್ಲಿ ಗುರುವಾರ ಮುಂಜಾನೆಯಿಂದಲೇ ಧಾರಾಕಾರ ಮಳೆ ಸುರಿಯುತ್ತಿದ್ದು ಸಂಜೆಯ ವೇಳೆಗೆ ಮಿತ್ತಕೋಡಿ ಪೆಟ್ರೋಲ್ ಪಂಪು ಸಮೀಪದ ಬೃಹತ್ ಗುಡ್ಡ ಪ್ರದೇಶವು ಏಕಾಏಕಿ ಕುಸಿದು ಬಿದ್ದಿದೆ. ಘಟನೆಯಿಂದ ಪೆಟ್ರೋಲ್ ಪಂಪ್ ಕಟ್ಟಡಕ್ಕೆ ಸ್ವಲ್ಪ ಹಾನಿಯಾಗಿದೆ. ಅಲ್ಲದೆ ಮಳೆ ಇನ್ನಷ್ಟು ಸುರಿದರೆ ಈ ಪ್ರದೇಶದ ಇನ್ನಷ್ಟು ಗುಡ್ಡ ಪ್ರದೇಶವು ಕುಸಿಯುವ ಅಪಾಯ ಎದುರಾಗಿದೆ ಎಂದು ತಿಳಿದು ಬಂದಿದೆ.

ಕಳೆದ ವರ್ಷದ ಮಳೆಗಾಲದಲ್ಲಿ ಇಲ್ಲಿಗೆ ಸಮೀಪದ ಬೋಳಿಯಾರ್ ಪ್ರದೇಶದಲ್ಲಿಯೂ ಗುಡ್ಡ ಪ್ರದೇಶವು ಕುಸಿದು ಬಿದ್ದು ಕೃಷಿ ಪ್ರದೇಶಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿತ್ತು. ಅಲ್ಲದೆ ಮಿತ್ತಕೋಡಿಯಲ್ಲೂ ಕಳೆದ ವರ್ಷದ ಮಳೆಗೆ ರಸ್ತೆಗೆ ಮಣ್ಣು ಕುಸಿದು ಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News