ಕೋಳಿ ಅಂಕ: ಐವರ ಬಂಧನ

Update: 2020-07-16 16:49 GMT

ಶಿರ್ವ, ಜು.16: ಶಿರ್ವ ಗ್ರಾಮದ ಪೆಜತಕಟ್ಟೆ ಎಂಬಲ್ಲಿ ಜು.15ರಂದು ಸಂಜೆ ವೇಳೆ ಕೋಳಿ ಅಂಕಕ್ಕೆ ದಾಳಿ ನಡೆಸಿದ ಶಿರ್ವ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಕುರ್ಕಾಲಿನ ಪ್ರವೀಣ್(28), ಕೊಡವೂರಿನ ಜ್ಞಾನೆಶ್(22), ಉಪ್ಪೂರಿನ ಯತೀಶ್(23), ಮೂಡುಬೆಳ್ಳೆಯ ವಿಜಯ(42), ಪಡುಬೆಳ್ಳೆ ಪಾಜಕದ ಆನಂದ(45) ಬಂಧಿತ ಆರೋಪಿಗಳು. ದಾಳಿ ವೇಳೆ ಕೆಲವು ಮಂದಿ ಪರಾರಿಯಾಗಿದ್ದಾರೆ. ಬಂಧಿತರಿಂದ 2050ರೂ. ನಗದು, 7 ಕೋಳಿಗಳು, ಎರಡು ಬಾಳು, ಒಂದು ರಿಕ್ಷಾ, ಐದು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News