ಉಳ್ಳಾಲ: ಗುರುವಾರ ನಾಲ್ವರಿಗೆ ಕೊರೋನ ಪಾಸಿಟಿವ್

Update: 2020-07-16 17:46 GMT

ಉಳ್ಳಾಲ, ಜು.16: ಇಲ್ಲಿನ ನಗರಸಭಾ ವ್ಯಾಪ್ತಿಯಲ್ಲಿ ಓರ್ವ ವೃದ್ಧೆ ಸೇರಿದಂತೆ ಒಟ್ಟು ನಾಲ್ವರಲ್ಲಿ ಗುರುವಾರ ಕೊರೋನ ವೈರಸ್ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ದೃಢೀಕರಿಸಿದೆ. ಅಳೇಕಲದ 28 ವರ್ಷದ ಮಹಿಳೆ, ಉಳ್ಳಾಲದಲ್ಲಿ 72 ವರ್ಷದ ವೃದ್ಧೆ, ತೊಕ್ಕೊಟ್ಟುವಿನಲ್ಲಿ 29 ವರ್ಷದ ಪುರುಷ ಹಾಗೂ ಕೈಕೋದಲ್ಲಿ 56 ವರ್ಷದ ಪುರುಷರೊಬ್ಬರು ಸೋಂಕಿಗೆ ಪಾಸಿಟಿವ್ ಆಗಿದ್ದಾರೆ.

ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಗುರುವಾರ ಮತ್ತೆ ನಾಲ್ಕು ಕೊರೋನ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಮಡ್ಯಾರ್‌ನಲ್ಲಿ ಒಂದು ಮತ್ತು ಕೋಟೆಕಾರ್‌ನಲ್ಲಿ ಎರಡು ಮತ್ತು ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಅದೇ ರೀತಿ ಬೆಳ್ಮ ಗ್ರಾಮದ ದೇರಳಕಟ್ಟೆಯಲ್ಲಿ 3, ಸೋಮೇಶ್ವರ ಪುರಸಭಾ ವ್ಯಾಪ್ತಿಯ ಉಚ್ಚಿಲ ತಲಪಾಡಿ ಗ್ರಾಮದ ಕೆ.ಸಿ.ನಗರ, ತಲಪಾಡಿ, ಮುನ್ನೂರು ಗ್ರಾಮದ ಕುತ್ತಾರ್ ಮತ್ತು ಅಸೈಗೋಳಿಯಲ್ಲಿ ತಲಾ ಒಂದೊಂದು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಜೂ.23ರಿಂದ ಈವರೆಗೆ ಉಳ್ಳಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಟ್ಟು 315 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ಒಟ್ಟು 270 ಕೊರೋನ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ. ಒಟ್ಟು 860 ಮಂದಿಯ ಗಂಟಲಿನ ದ್ರವ ಪರೀಕ್ಷೆ ಮಾಡಿಸಲಾಗಿದ್ದು, ಈ ಪೈಕಿ 50 ಮಂದಿಯ ವರದಿ ಬರಲು ಬಾಕಿ ಇದೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ. ವಿದೇಶದಿಂದ ಆಗಮಿಸಿದವರು ಸೇರಿದಂತೆ ಕೊರೋನ ದೃಢಪಟ್ಟ ಒಟ್ಟು 178 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News