ಉಳ್ಳಾಲ: ಕೋವಿಡ್-19 ಜನಜಾಗೃತಿ ಸಭೆ

Update: 2020-07-16 17:57 GMT

ಉಳ್ಳಾಲ, ಜು.16: ನಾವು ಮಾಡುವ ಕೆಲವು ತಪ್ಪುಗಳಿಂದ ನಮ್ಮ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ. ಕೊರೋನ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದರೆ ಮನೆಯಲ್ಲೇ ಕ್ವಾರಂಟೈನ್ ಮಾಡಿ ಜಾಗ್ರತೆ ವಹಿಸಿಕೊಳ್ಳಬೇಕು ಎಂದು ಕೋವಿಡ್-19 ಮಾಹಿತಿ ಕಾರ್ಯಾಗಾರದ ತರಬೇತುದಾರ ಡಾ.ನವೀನ್ ಹೇಳಿದ್ದಾರೆ.

ನಮ್ಮೂರ ಧ್ವನಿ ಸೇವಾ ಸಂಘದ ಆಶ್ರಯದಲ್ಲಿ ಅಳೇಕಲ ಸೈಯದ್ ಮದನಿ ಶಾಲೆಯ ಸಭಾಂಗಣದಲ್ಲಿ ಬುಧವಾರ ನಡೆದ ಕೋವಿಡ್-19 ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು

ಶಾಸಕ ಖಾದರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದ ನಮ್ಮೂರ ಧ್ವನಿ ಸೇವಾ ಸಂಘದ ಅಧ್ಯಕ್ಷ ಎ.ಉಮರ್ ಫಾರೂಕ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಳ್ಳಾಲ ನಗರಸಭಾ ಪೌರಾಯುಕ್ತ ರಾಯಪ್ಪ ಸ್ಯಾನಿಟೈಸರ್ ಸಿಂಪಡಣೆಗೆ ಚಾಲನೆ ನೀಡಿದರು. ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಹಾಜಿ ಸ್ಟಿಕರ್ ಬಿಡುಗಡೆ ಮಾಡಿದರು. ಸೆಬೆಸ್ಟಿಯನ್ ಚರ್ಚ್ ಉಪಾಧ್ಯಕ್ಷ ಮೌರೀಸ್ ಮೊಂತೆರೊ ಮಾಸ್ಕ್ ವಿತರಣೆ ಮಾಡಿದರು. ಉಳ್ಳಾಳ್ತಿ ಧರ್ಮ ಅರಸರ ಕ್ಷೇತ್ರದ ಗುರಿಕಾರ ರಾಜೇಶ್ ಗುರಿಕಾರ ರೋಗ ನಿರೋಧಕ ಮಾತ್ರೆಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಮುಸ್ತಫ ಮಂಚಿಲರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಳೇಕಳ ಕರಿಯಕ್ಕೆ ಒಳಪಟ್ಟ ಮಸೀದಿ ಪದಾಧಿಕಾರಿಗಳಾದ ಯು.ಡಿ.ಅಶ್ರಫ್ ಅಳೇಕಲ, ಹಾಜಿ ಮುಹಮ್ಮದ್ ತ್ವಾಹಾ ಹಳೆಕೋಟೆ, ಬಿ.ಎಚ್.ಫಾರೂಕ್ ಅಳೇಕಲ, ಹಾಜಿ ಅಲಿಯಬ್ಬ ಮಾರ್ಗತಲೆ, ಮಕ್ಸೂದ್ ಖಾದರ್ ಮಂಚಿಲ, ನಗರ ಸಭೆ ಕೌನ್ಸಿಲರ್‌ಗಳಾದ ಅಸ್ಗರ್ ಅಲಿ, ಯು.ಎ.ಇಸ್ಮಾಯೀಲ್, ಅಯ್ಯೂಬ್, ಝರೀನ ರವೂಫ್, ನಮ್ಮೂರ ಧ್ವನಿ ಸಂಘದ ಸದಸ್ಯರಾದ ಅಶ್ಫಾಕ್, ಶಮೀರ್, ಅಲ್ತಾಫ್ ಹಳೆಕೋಟೆ, ಅಶ್ರಫ್ ಸುಳ್ಯ, ನಿಝಾಂ, ಹಸನ್,ಇಜಾಝ್, ಮಹ್ಮೂದ್, ಕಬೀರ್, ರಫೀಕ್, ತಲ್ಹತ್, ಶಿಹಾಬ್ ತಂಙಳ್, ನಝೀರ್, ತ್ವಾಹಾ , ನೂರಿಷಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News