ಪಡುಬಿದ್ರೆ ಬೀಚ್‌ನಲ್ಲಿ ಕಡಲ್ಕೊರೆತ: ಸಮುದ್ರಪಾಲಾದ ಕಾಂಕ್ರಿಟ್ ಅಂಗಣ
Update: 2020-07-17 15:33 IST
ಪಡುಬಿದ್ರೆ, ಜು.17: ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಪಡುಬಿದ್ರೆಯ ಬೀಚ್‌ನಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ.
ಸಮುದ್ರದ ಅಬ್ಬರಕ್ಕೆ ಪಡುಬಿದ್ರೆ ಸಾಗರ್ ವಿದ್ಯಾಮಂದಿರ ಶಾಲೆಯ ಮುಂಭಾಗದಲ್ಲಿ ಬೀಚ್‌ಗೆ ಸರಕಾರಿ ಅನುದಾನದಿಂದ ನಿರ್ಮಿಸಲಾದ ಕಾಂಕ್ರಿಟ್ ಅಂಗಣ ಬಿರುಕು ಬಿಟ್ಟು ಹಾನಿಗೀಡಾಗಿದೆ. ಕಾಂಕ್ರಿಟ್ ಅಡ್ಡಗೋಡೆ, ಇಂಟರ್ಲಾಕ್ ಮತ್ತು ಮೆಟ್ಟಿಲುಗಳು ಸಮುದ್ರಪಾಲಾಗುತ್ತಿವೆ. ಈ ಭಾಗದಲ್ಲಿ ಸಾರ್ವಜನಿಕರು ಹೋಗದಂತೆ ಮುಂಜಾಗೃತೆ ವಹಿಸಲಾಗಿದೆ.
ಕಾಡಿಪಟ್ಣದಲ್ಲೂ ಕಡಲ್ಕೊರೆತ ಭೀತಿ ಎದುರಾಗಿದೆ. ಈ ಪ್ರದೇಶದಲ್ಲಿ ತೆಂಗು, ಕಡಲ್ಕೊರೆತಕ್ಕೆ ಹಾಕಲಾದ ಕಲ್ಲುಗಳು ಸಮುದ್ರ ಪಾಲಾಗುವ ಸಾಧ್ಯತೆ ಉಂಟಾಗಿದೆ. ಉಚ್ಚಿಲ, ಎರ್ಮಾಳು, ಪಡುಬಿದ್ರೆ ವ್ಯಾಪ್ತಿಯಲ್ಲಿ ಸಮುದ್ರ ಬೋರ್ಗರೆಯುತ್ತಿದೆ.