×
Ad

ಕೋವಿಡ್‌ಗೆ ಕುವೈತ್‌ನಲ್ಲಿ ಕುಂದಾಪುರದ ಜನಪ್ರಿಯ ಕ್ರೀಡಾಪಟು ಬಲಿ

Update: 2020-07-17 15:57 IST

ಕುಂದಾಪುರ, ಜು.17: ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ಮಾಜಿ ಅಥ್ಲೆಟಿಕ್ ಚಾಂಪಿಯನ್, ಖ್ಯಾತ ಕಬಡ್ಡಿ ಮತ್ತು ವಾಲಿಬಾಲ್ ಆಟಗಾರ ಕುಂದಾಪುರ ಖಾರ್ವಿಕೇರಿ ನಿವಾಸಿ ಶೇಕ್ ಮುಹಮ್ಮದ್ ಸಯೀದ್(56) ಕುವೈತ್‌ನಲ್ಲಿ ಜು.16ರಂದು ನಿಧನರಾಗಿದ್ದಾರೆ.

ಕುವೈತ್‌ನ ಕೆ.ಆರ್.ಎಚ್. ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಸಯೀದ್ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿ ತಪಾಸಣೆ ನಡೆಸಿದಾಗ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿತ್ತೆನ್ನಲಾಗಿದೆ. ಸುಮಾರು 22 ದಿನಗಳ ಹಿಂದೆ ಕುವೈತ್‌ನ ಆಸ್ಪತ್ರೆಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಯೀದ್ , ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟರೆನ್ನಲಾಗಿದೆ. ಮೃತದೇಹದ ದಫನ ಕಾರ್ಯವನ್ನು ಕುವೈಟ್‌ನಲ್ಲಿಯೇ ನಡೆಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

80ರ ದಶಕದಲ್ಲಿ ಕುಂದಾಪುರದ ಖ್ಯಾತ ಕ್ರೀಡಾಪಟುವಾಗಿ ಮಿಂಚಿದ್ದ ಸಯೀದ್, ಯುವ ಆಟಗಾರರಿಗೆ ತರಬೇತುದಾರರಾಗಿಯೂ ಸೇವೆ ಸಲ್ಲಿಸಿದ್ದರು. ಆರಂಭದ ಕೆಲ ವರ್ಷ ಯುಎಇಯಲ್ಲಿ ಉದ್ಯೋಗದಲ್ಲಿದ್ದ ಇವರು ಬಳಿಕ ಕುವೈತ್‌ನಲ್ಲಿ ಉದ್ಯೋಗದಲ್ಲಿದ್ದರು.

ಮೃತರು ಪತ್ನಿ, ಮೂವರು ಪುತ್ರಿಯರು, ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ಹಲವೆಡೆಯಿಂದ ಸಂತಾಪ ವ್ಯಕ್ತವಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News