×
Ad

ವೃದ್ಧೆಗೆ ಹಲ್ಲೆ ನಡೆಸಿದ ಆರೋಪ: ಪುತ್ರ, ಮೊಮ್ಮಗನ ಬಂಧನ

Update: 2020-07-17 16:22 IST

ಬೆಳ್ತಂಗಡಿ, ಜು.17: ಅನಾರೋಗ್ಯಪೀಡಿತ ವಯೋವೃದ್ಧೆ ತಾಯಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಮಗ ಮತ್ತು ಮೊಮ್ಮಗನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

 ಬೆಳ್ತಂಗಡಿಯ ಸವಣಾಲು ಹಲಸಿನಕಟ್ಟೆ ನಿವಾಸಿ ಅಪ್ಪಿ ಶೆಟ್ಟಿಯವರು ಮಗ, ಮೊಮ್ಮಗನಿಂದ ಹಿಂಸೆಗೊಳಗಾದ ಹಿರಿ ಜೀವ. ಹಲ್ಲೆಗೈದು ಹಿಂಸಿಸಿದ ಆರೋಪದಲ್ಲಿ ಅಪ್ಪಿ ಶೆಟ್ಟಿಯವರ ಪುತ್ರ ಶ್ರೀನಿವಾಸ ಶೆಟ್ಟಿ ಮತ್ತು ಮೊಮ್ಮಗ ಪ್ರದೀಪ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಅನಾರೋಗ್ಯಪೀಡಿತರಾಗಿ ಹಾಸಿಗೆ ಹಿಡಿದಿರುವ ಅಪ್ಪಿ ಶೆಟ್ಟಿಯನ್ನು ಮಗ ಹಾಗೂ ಮೊಮ್ಮಗ ಹಿಂಸಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಠಾಣಾ ಪೊಲೀಸರು ಘಟಣೆಯ ಬಗ್ಗೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.

ಇದೀಗ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಕಲಂ: 323, 504 IPC and 24 senior citizen act 2007ರಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News